‘ದೇಶಕ್ಕೆ ಬರುವ ಆಕ್ಸಿಜನ್ ಸಿಲಿಂಡರ್ ಗಳಿಗೆ ತಡೆಯೊಡ್ಡುತ್ತಿದೆ ಚೀನಾ’ ಎಂದ ಸೋನು ಟ್ವೀಟ್ ಗೆ ಚೀನಾ ರಾಯಭಾರಿ ಪ್ರತಿಕ್ರಿಯೆ..!
ಕಳೆದ ವರ್ಷ ಲಾಕ್ ಡೌನ್ ಸಮಯದಿಂದಲೂ ತಮ್ಮನ್ನ ತಾವು ಜನರ ಸಹಾಯದಲ್ಲೇ ತೊಡಗಿಸಿಕೊಂಡಿರುವ ಸೋನು ಜನರ ಪಾಲಿನ ರಿಯಲ್ ಹೀರೋ ಆಗಿದ್ದಾರೆ. ಆದ್ರೆ ದೇಶದಲ್ಲಿ ಆಕ್ಸಿಜನ್ ಬೆಡ್ ಕೊರತೆಯಾಗಿದ್ದು, ಸೋಂಕಿತರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಿರೋವಾಗ ಹೇಗೋ ಕಷ್ಟಪಟ್ಟು ಎಲ್ಲೆಲ್ಲಿಂದಲೋ ಆಕ್ಸಿಜನ್ ತರುವ ವ್ಯವಸ್ಥೆ ಮಾಡಿದ್ರೆ ಚೀನಾ ನಮ್ಮ ದೇಶಕ್ಕೆ ಬರುವ ಆಕ್ಸಿಜನ್ ಸಿಲಿಂಡರ್ಗಳಿಗೆ ತಡೆಯೊಡ್ಡುತ್ತಿದೆ ಎಂದು ಸೋ ಗುಡುಗಿದ್ದರು..
‘ನಾವು ಭಾರತಕ್ಕೆ ಪ್ರಪಂಚದ ಬೇರೆ ಬೇರೆ ಕಡೆಯಿಂದ ಆಕ್ಸಿಜನ್ ಸಿಲಿಂಡರ್ಗಳನ್ನು ತರಿಸಿಕೊಳ್ಳುತ್ತಿದ್ದೇವೆ. ಆದರೆ ದುರಾದೃಷ್ಟವೆಂದರೇ ಚೀನಾ ನಮ್ಮ ದೇಶಕ್ಕೆ ಬರುವ ಆಕ್ಸಿಜನ್ ಸಿಲಿಂಡರ್ಗಳಿಗೆ ತಡೆಯೊಡ್ಡುತ್ತಿದೆ. ಇಲ್ಲಿ ನಾವು ಅನೇಕ ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ ದಯವಿಟ್ಟು ಇಂತಹ ಕೆಲಸಕ್ಕೆ ಮುಂದಾಗದೇ ನಮಗೆ ಸಹಾಯ ಮಾಡಿ’ ಎಂದು ಚೀನಾ ರಾಯಭಾರಿ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯವನ್ನು ಉಲ್ಲೇಖಿಸಿ ಸೋನು ಸೂದ್ ಟ್ವೀಟ್ ಮಾಡಿದ್ದರು.
ಇದಕ್ಕೆ ಉತ್ತರ ನೀಡಿರುವ ಚೀನಾ ರಾಯಭಾರಿ ಸನ್ ವಿಡಾಂಗ್ ‘ಸೋನು ಸೂದ್ ಅವರೇ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಚೀನಾ ಗರಿಷ್ಠ ಸಹಾಯ ನೀಡುತ್ತಿದೆ. ಚೀನಾ ಮತ್ತು ಭಾರತದ ನಡುವಿನ ಸರಕು ಸಾಗಾಣೆಗೆ ಯಾವುದೇ ತಡೆ ನೀಡಿಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ 2 ವಾರದಲ್ಲಿ ಭಾರತ ಮತ್ತು ಚೀನಾದ ನಡುವೆ 63 ಸರಕು ಸಾಗಾಣೆ ವಿಮಾನಗಳು ಸಂಚರಿಸಿವೆ’ ಎಂದು ಉತ್ತರ ನೀಡಿದ್ದಾರೆ.
ಅಲ್ಲದೇ ಯಾವುದೇ ಸಮಸ್ಯೆ ಇದ್ದರೂ ಈಮೇಲ್ ಮೂಲಕವಾಗಿ ನಮ್ಮ ಗಮನಕ್ಕೆ ತನ್ನಿ. ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಸೋನು ಸೂದ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ. ಇನ್ನೂ ಒಪ್ರತಿಕ್ರಿಯೆ ನೀಡಿದ್ದಕ್ಕೆ ಸೋನು ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ನಿಮ್ಮ ಕಚೇರಿ ಸಿಬ್ಬಂದಿ ಜೊತೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವ ಚಿಂತನೆ ನಡೆಸುವುದಾಗಿ ತಿಳಿಸಿದ್ಧಾರೆ.