ದಕ್ಷಿಣ ರೈಲ್ವೆ – ಹತ್ತನೇ ತರಗತಿ ಪಾಸಾದ ಯುವಕರಿಗೆ ಒಳ್ಳೆಯ ಸುದ್ದಿ
ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಹತ್ತನೇ ತರಗತಿ ಪಾಸಾದ ಯುವಕರಿಗೆ ಒಳ್ಳೆಯ ಸುದ್ದಿ. ದಕ್ಷಿಣ ರೈಲ್ವೆಯಲ್ಲಿ 3378 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದಕ್ಷಿಣ ರೈಲ್ವೆಯ ವಿವಿಧ ವಿಭಾಗಗಳಲ್ಲಿ ಅಪ್ರೆಂಟಿಸ್ ಹುದ್ದೆಗಳಲ್ಲಿ ಆಯ್ದ ಯುವಕರನ್ನು ನೇಮಿಸಲಾಗುವುದು. ಈ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜೂನ್ 1, 2021 ರಿಂದ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 20 ಜೂನ್ 2021 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ಅನುಭವ, ಆಯ್ಕೆ ಮಾನದಂಡಗಳು ಮತ್ತು ಇತರ ವಿವರಗಳನ್ನು ದಕ್ಷಿಣ ರೈಲ್ವೆಯ ಅಧಿಕೃತ ವೆಬ್ಸೈಟ್ sr.indianrailways.gov.in ನಲ್ಲಿ ಪರಿಶೀಲಿಸಬಹುದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10 ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ, ಅಭ್ಯರ್ಥಿಯು ಸಂಬಂಧಿತ ವಿಷಯದಲ್ಲಿ ಐಟಿಐ ಡಿಪ್ಲೊಮಾ ಹೊಂದಿರಬೇಕು.
ಈ ಹುದ್ದೆಗಳಿಗೆ ಅಭ್ಯರ್ಥಿಯ ವಯಸ್ಸು 15 ರಿಂದ 24 ವರ್ಷಗಳು ಆಗಿರಬೇಕು. ಕಾಯ್ದಿರಿಸಿದ ವರ್ಗಕ್ಕೆ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 1 ಜೂನ್ 2021
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30 ಜೂನ್ 2021
ಒಟ್ಟು ಹುದ್ದೆಗಳ ಸಂಖ್ಯೆ – 3378
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2021 ಜೂನ್ 1 ರಿಂದ ಜೂನ್ 30 ರವರೆಗೆ ಆನ್ಲೈನ್ ಮೋಡ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅಂಚೆ ಅಥವಾ ಇನ್ನಾವುದೇ ಮೋಡ್ ಮೂಲಕ ಕಳುಹಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ದಕ್ಷಿಣ ರೈಲ್ವೆಯ ಅಧಿಕೃತ ವೆಬ್ಸೈಟ್ಗೆ sr.indianrailways.gov.in ನಲ್ಲಿ ಭೇಟಿ ನೀಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಬ್ಬಿನ ರಸದ ಇನ್ನಷ್ಟು ಆರೋಗ್ಯ ಪ್ರಯೋಜನಗಳು#Saakshatv #healthtips #sugarcane https://t.co/2XjBuk8raQ
— Saaksha TV (@SaakshaTv) June 1, 2021
ಎಸ್ಬಿಐ ನಿಂದ 5 ಲಕ್ಷ ರೂಪಾಯಿಗಳ ಕೋವಿಡ್ ಪರ್ಸನಲ್ ಲೋನ್! ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?#SBI #coronatreatment https://t.co/kxXOOAG3vK
— Saaksha TV (@SaakshaTv) June 2, 2021
ರುಚಿಯಾದ ಕ್ಯಾಪ್ಸಿಕಂ ಬಾತ್#saakshatv #cooking #recipe https://t.co/MhP2wa419O
— Saaksha TV (@SaakshaTv) June 2, 2021
ನಿಮಗೆ ದಿನವಿಡೀ ಆಲಸ್ಯ , ದಣಿವು ಕಾಣಿಸಿಕೊಳ್ಳುತ್ತಿದೆಯೇ? ಹಾಗಿದ್ದರೆ ವಿಟಮಿನ್ ಡಿ ಕೊರತೆ ಕಾರಣವಾಗಿರಬಹುದು#Saakshatv #healthtips #vitaminD https://t.co/GlsUpQobAH
— Saaksha TV (@SaakshaTv) June 2, 2021
ಕೋವಿಡ್ ಚಿಕಿತ್ಸೆಗಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ನೀಡಲಿದೆ 5 ಲಕ್ಷ ರೂಗಳವರೆಗೆ ಸಾಲ !#Banks #loans #covidtreatment https://t.co/tJYFqSyYYO
— Saaksha TV (@SaakshaTv) June 1, 2021
#Southern #Railway #Apprentice