ಪ್ರಧಾನಿಗಳ ಆರೋಗ್ಯ ಸಂವರ್ಧನೆಗಾಗಿ ವಿಶೇಷಪೂಜೆ

1 min read
BJP Mahila Morcha Saaksha Tv

ಪ್ರಧಾನಿಗಳ ಆರೋಗ್ಯ ಸಂವರ್ಧನೆಗಾಗಿ ವಿಶೇಷಪೂಜೆ Saaksha Tv

ಕೆ.ಆರ್.ಪೇಟೆ: ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ಸಂವರ್ಧನೆಯಾಗಲಿ, ಅವರಿಗೆ ಎದುರಾಗಿರುವ ಕಂಟಕಗಳು ದೂರಾಗಿ, ನೂರುಕಾಲ ಆರೋಗ್ಯವಂತರಾಗಿರಲಿ ಎಂದು ಪಟ್ಟಣದ ಶ್ರೀ ಭ್ರಮರಾಂಭಮಲ್ಲಿಕಾರ್ಜುನ  ದೇವಾಲಯದಲ್ಲಿ ಬಿಜೆಪಿ ಮಹಿಳಾ ಘಟಕ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕಾರ್ಯಕರ್ತರು ಹಾಗೂ ಮುಖಂಡರು.

ಅಲ್ಲದೇ ಪಂಜಾಬ್ ರಾಜ್ಯ ಸರ್ಕಾರವು ಭದ್ರತಾ ಲೋಪವೆಸಗುವ ಮೂಲಕ ವಿಶ್ವವೇ ಮೆಚ್ಚಿರುವ ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಜೀವಕ್ಕೆ ಸಂಚಕಾರ ತರಲು ಹೊರಟಿದೆ. ಆದರೆ ದೇಶದ 130 ಕೋಟಿ ಜನತೆ ಹಾಗೂ ಕಾಶಿ ವಿಶ್ವನಾಥನ ಆಶೀರ್ವಾದವು ಪ್ರಧಾನಿಗಳಿಗಿದೆ ಎಂದು ವೇದಬ್ರಹ್ಮ ಶ್ರೀ ರೋಹಿತ್ ಶರ್ಮಾ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಅವರು ಪೂಜೆ ಸಲ್ಲಿಸಿ ಮಾತನಾಡಿದರು.

Mallikarjuna Saaksha Tv

ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಕೆ.ಆರ್.ಪೇಟೆ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್ ಮತ್ತು ಮಹಿಳಾ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd