ಗಸ್ತು ತಿರುಗುತ್ತಿದ್ದ ಪೊಲೀಸರನ್ನೆ ಕೊಚ್ಚಿ ಕೊಂದ ಮೇಕೆ ಕಳ್ಳರು
ತಿರುಚ್ಚಿ ಜಿಲ್ಲೆಯ ನವಲಪಟ್ಟು ಮೂಲದ 55 ವರ್ಷದ ಸಬ್ ಇನ್ಸ್ಪೆಕ್ಟರ್ ಭಾನುವಾರ ನಸುಕಿನಲ್ಲಿ ಪುದುಕೊಟ್ಟೈ ಜಿಲ್ಲೆಯ ಬಳಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಮೇಕೆ ಕಳ್ಳರ ತಂಡವನ್ನು ಬೆನ್ನಟ್ಟಿ ಹೋಗುವಾಗ, ಕಳ್ಳರು ಕೊಲೆ ಮಾಡಿದ್ದಾರೆ.
ತಿರುಚ್ಚಿಯ ಭೂಮಿನಾಥನ್ ನವಲಪಟ್ಟು ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭಾನುವಾರ ಬೆಳಗ್ಗೆ ಗಸ್ತು ತಿರುಗುವ ವೇಳೆ ಬೈಕ್ಗಳಲ್ಲಿ ಮೇಕೆಗಳನ್ನು ಸಾಗಿಸುತ್ತಿದ್ದನ್ನು ನೋಡಿದ ಎಸ್ ಐ. ಪೊಲೀಸ್ ಚೆಕ್ಪೋಸ್ಟ್ ಬಳಿ ನಿಲ್ಲುವಂತೆ ಹೇಳಿದ್ದಾರೆ. ಆದರೂ ಬೈಕ್ನಲ್ಲಿ ತೆರಳುತ್ತಿದ್ದ ಗ್ಯಾಂಗ್ ತಪ್ಪಿಸಿಕೊಂಡು ಮುನ್ನುಗ್ಗಿದ್ದಾರೆ.
ಪುದುಕೊಟ್ಟೈ ಜಿಲ್ಲೆಯ ಕೀರನೂರಿನ ಕಲಮಾವೂರ್ ಗ್ರಾಮದ ಬಳಿ ಇಬ್ಬರು ಕಳ್ಳರನ್ನ ಬೆನ್ನತ್ತಿ ಹಿಡಿದಿದ್ದಾರೆ. ಎಸ್ಐ ಭೂಮಿನಾಥನ್ ಮೇಕೆ ಕಳ್ಳರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಂತೆ ಗುಂಪಿನಲ್ಲಿದ್ದ ದುಷ್ಕರ್ಮಿಯೊಬ್ಬ ಕುಡುಗೋಲು ತೆಗದು ಪೊಲೀಸರ ತಲೆಗೆ ಹೊಡೆದಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದ ಭೂಮಿನಾಥನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಇಬ್ಬರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಭೂಮಿನಾಥನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಕೀರನೂರು ಪೊಲೀಸ್ ಠಾಣೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಚ್ಚಿ ಜಿಎಚ್ಗೆ ಕಳುಹಿಸಿದ್ದಾರೆ. ಅಪರಾಧಿಗಳ ಪತ್ತೆಗೆ ಹೆಚ್ಚಿನ ತನಿಖೆ ನಡೆಯುತ್ತಿದೆ