SRH vs LSG | ಪ್ಲೇಯಿಂಗ್ 11 ಹೇಗಿರಲಿದೆ..?

1 min read
SRH vs LSG Dream11 Prediction IPL Fantasy Cricket Tips saaksha tv

SRH vs LSG | ಪ್ಲೇಯಿಂಗ್ 11 ಹೇಗಿರಲಿದೆ..?

ಇಂಡಿಯನ್ ಪ್ರಿಮಿಯರ್ ಲೀಗ್ ನ 12 ನೇ ಪಂದ್ಯದಲ್ಲಿ  ಸನ್‌ರೈಸರ್ಸ್ ಹೈದರಾಬಾದ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲುಂಡಿದೆ.

ಹೀಗಾಗಿ ಪಂದ್ಯದಲ್ಲಿ ಗೆಲ್ಲಬೇಕಾದ ಅನಿವಾರ್ಯತೆಯಲ್ಲಿದೆ. ಮುಖ್ಯವಾಗಿ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ತಂಡ ಸುಧಾರಿಸಬೇಕಾಗಿದೆ.

ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಟಿ, ನಿಕೋಲಸ್ ಪೂರನ್, ವಾಷಿಂಗ್ ಟನ್ ಸುಂದರ್ ತಂಡದ ಬ್ಯಾಟಿಂಗ್ ಅಸ್ತ್ರಗಳಾಗಿದ್ದಾರೆ. ಭುವನೇಶ್ವರ್ ಕುಮಾರ್, ಮಲಿಕ್, ಟಿ ನಟರಾಜ್ ತಂಡದ ಬೌಲಿಂಗ್  ಆಯುಧಗಳಾಗಿವೆ.

ಮತ್ತೊಂದೆಡೆ, ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಬಲಿಷ್ಠವಾಗಿ ಕಾಣುತ್ತಿದೆ. ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ತಂಡ ಸಾಲಿಡ್ ಆಗಿದೆ.

SRH vs LSG Dream11 Prediction IPL Fantasy Cricket Tips saaksha tv

ಗುಜರಾತ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋತರೂ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಸಿ ಗೆಲುವಿನ ಟ್ರ್ಯಾಕ್ ಗೆ ಮರಳಿದೆ.   

ಇಂದಿನ ಪಂದ್ಯ  ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ. ಈ ಕ್ರೀಡಾಂಗಣ ಬ್ಯಾಟಿಂಗ್, ಬೌಲರ್ ಗಳಿಗೆ ಅನುಕೂಲಕರವಾಗಿದೆ. ಹೀಗಾಗಿ ಪಂದ್ಯ ರೋಚಕತೆಯಿಂದ ಕೂಡಿರಲಿದೆ.

ಇನ್ನು ಉಭಯ ತಂಡಗಳ ಸಂಭಾವ್ಯ ಟೀಂ ಹೀಗಿರಲಿದೆ.

ಲಕ್ನೋ ಸೂಪರ್ ಜೈಂಟ್ಸ್

ಕೆಎಲ್ ರಾಹುಲ್ (ಸಿ), ಕ್ವಿಂಟನ್ ಡಿ ಕಾಕ್ (ಡಬ್ಲ್ಯು), ಎವಿನ್ ಲೂಯಿಸ್, ಮನೀಶ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ದುಷ್ಮಂತ ಚಮೀರಾ, ಆಂಡ್ರ್ಯೂ ಟೈ, ರವಿ ಬಿಷ್ಣೋಯ್, ಅವೇಶ್ ಖಾನ್

ಸನ್ ರೈಸರ್ಸ್ ಹೈದರಾಬಾದ್

ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಕೇನ್ ವಿಲಿಯಮ್ಸನ್ (c), ನಿಕೋಲಸ್ ಪೂರನ್ (WK), ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್ SRH vs LSG Dream11 Prediction IPL Fantasy Cricket Tips

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd