SRH vs MI Match | ಮುಂಬೈ ವಿರುದ್ಧ ರೈಸ್ ಆಗುತ್ತಾ ಸನ್ ರೈಸರ್ಸ್
ಇಂಡಿಯನ್ ಪ್ರಿಮಿಯರ್ ಲೀಗ್ ನ 65 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ವಾಂಖೇಡೆ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ.
ಈ ಆವೃತ್ತಿಯಲ್ಲಿ ಅತ್ಯಂತ ಕಳಫೆ ಪ್ರದರ್ಶನ ನೀಡಿರುವ ಮುಂಬೈ ಇಂಡಿಯನ್ಸ್ ತಂಡ 12 ಪಂದ್ಯಗಳನ್ನಾಡಲಿದೆ.
ಈ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು, 9 ಒಂಭತ್ತು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಆರು ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಇತ್ತ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಆವೃತ್ತಿಯಲ್ಲಿ 12 ಪಂದ್ಯಗಳನ್ನಾಡಿದ್ದು, ಐದು ಪಂದ್ಯಗಳನ್ನು ಗೆದ್ದಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
ಇನ್ನು ಕಳೆದ ಪಂದ್ಯಗಳ ರಿಸಲ್ಟ್ ಬಗ್ಗೆ ಮಾತನಾಡೋದಾದ್ರೆ, ರೋಹಿತ್ ಬಳಕ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್ ಗಳಿಂದ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಮುಂಬೈ ಪರ ತಿಲಕ್ ವರ್ಮಾ 34 ರನ್, ಡೆನಿಯಲ್ ಸ್ಯಾಮ್ಸ್ ಮೂರು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮತ್ತೊಂದು ಕಡೆ ಸನ್ ರೈಸರ್ಸ್ ಹೈದರಾಬಾದ್ ತಂಡ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಖಾಮುಖಿಯಾಗಿತ್ತು.
ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ 54 ರನ್ ಗಳೊಂದಿಗೆ ಜಯ ಸಾಧಿಸಿದೆ. ಆದ್ರೆ ಪಂದ್ಯದಲ್ಲಿ ಸನ್ ರೈಸರ್ಸ್ ಪರ ಅಭಿಷೇಕ್ ಶರ್ಮಾ 43 ರನ್, ಐಡನ್ ಮಾಕ್ರಂ 32 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು.
ಅಂದಹಾಗೆ ಇಂದಿನ ಪಂದ್ಯದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಭಾರಿ ಮಹತ್ವದ್ದಾಗಿದೆ.
ಇಂದಿನ ಪಂದ್ಯವೂ ಸೇರಿಕೊಂಡು ಇನ್ನುಳಿದ ಎರಡು ಪಂದ್ಯಗಳನ್ನ ಗೆದ್ದರೇ ಸನ್ ರೈಸರ್ಸ್ ಹೈದರಾಬಾದ್ ಗೆ ಪ್ಲೇ ಆಫ್ಸ್ ಎಂಟ್ರಿ ಅವಕಾಶವಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲೋದು ಸನ್ ರೈಸರ್ಸ್ ಗೆ ಅನಿವಾರ್ಯವಾಗಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಮುಂಬೈ ತಂಡ ಕಳೆದ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನು ಮುಂದುವರೆಸಿದಿದರೇ ಇಂದಿನ ಪಂದ್ಯವನ್ನ ಗೆಲ್ಲಬಹುದು.
ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಟೀಂ ಡೆವಿಡ್ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ.
ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ ಫಾರ್ಮ್ ಗೆ ಬಂದಿರೋದು ಹಾಗೇ ಡೆನಿಯಲ್ ಸ್ಯಾಮ್ಸ್ ವಿಕೆಟ್ ಬೇಟೆಯಾಡುತ್ತಿದ್ದಾರೆ.
ಸನ್ ರೈಸರ್ಸ್ ತಂಡದ ವಿಚಾರಕ್ಕೆ ಬಂದರೇ ತಂಡಕ್ಕೆ ಕೇನ್ ವಿಲಿಯಮ್ ಸನ್ ಬ್ಯಾಡ್ ಫಾರ್ಮ್ ದೊಡ್ಡ ತಲೆನೋವಾಗಿದೆ.
ಆದ್ರೆ ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಟಿ, ಐಡನ್ ಮಾಕ್ರಂ, ನಿಕೋಲಸ್ ಪೂರನ್ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಬೌಲಿಂಗ್ ವಿಭಾಗಕ್ಕೆ ಟಿ ನಟರಾಜನ್, ಜಾನ್ಸನ್ ಕಮ್ ಬ್ಯಾಕ್ ಮಾಡಿರೋದು ಆನೆ ಬಲ ತಂದಿದೆ. srh-vs-mi-match-Sunrisers Hyderabad Probable XI