ಖಾನಾಪುರದಲ್ಲಿರುವ ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣ ಖಂಡೋಬಾ ದೇವಸ್ಥಾನವು ಬೀದರ್ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವಾಲಯವು ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿಯನ್ನು ಪಡೆದಿದೆ. ಇಲ್ಲಿ ನೆಲೆಸಿರುವ ಮಲ್ಲಣ್ಣನು ಶಿವನ ಅವತಾರವೆಂದು ಭಕ್ತರು ನಂಬುತ್ತಾರೆ.
ಇತಿಹಾಸ ಮತ್ತು ಮಹಿಮೆ:
ಒಂದು ಕಾಲದಲ್ಲಿ ಮಲ್ಲಾಸುರ ಮತ್ತು ಮಣಿಕಾಸುರ ಎಂಬ ಇಬ್ಬರು ರಾಕ್ಷಸ ಸಹೋದರರು ಭೂಲೋಕದಲ್ಲಿ ತೊಂದರೆಗಳನ್ನು ಉಂಟುಮಾಡುತ್ತಿದ್ದರು. ಋಷಿಮುನಿಗಳಿಗೂ ಮತ್ತು ಜನಸಾಮಾನ್ಯರಿಗೂ ತೊಂದರೆ ನೀಡುತ್ತಿದ್ದರು. ಇದನ್ನು ತಡೆಯಲು ಪರಶಿವನು ಮಾರ್ತಾಂಡ ಭೈರವನ ರೂಪದಲ್ಲಿ ಅಶ್ವಾರೂಢನಾಗಿ ಖಡ್ಗವನ್ನು ಹಿಡಿದು ಮಹಾಮಾರಿ ಘೃತಮಾರಿ ಮತ್ತು ಸಪ್ತಕೋಟಿ ದೇವಗಣಗಳೊಂದಿಗೆ ಮೈಲಾರಕ್ಕೆ ಬಂದನು. ಅಲ್ಲಿ ಆ ರಾಕ್ಷಸರನ್ನು ಸಂಹರಿಸಿ ಶಾಂತಿಯನ್ನು ನೆಲೆಗೊಳಿಸಿದನು ಎಂದು ಪುರಾಣಗಳು ಹೇಳುತ್ತವೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಈ ಕಾರಣದಿಂದ ಈ ಕ್ಷೇತ್ರವು ಪವಿತ್ರತೆಯನ್ನು ಪಡೆದುಕೊಂಡಿದೆ. ಮಲ್ಲಣ್ಣನು ಇಲ್ಲಿ ಲಿಂಗರೂಪದಲ್ಲಿ ನೆಲೆಸಿದ್ದು, ಭಕ್ತರು ಅವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಪ್ರತಿ ವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಇಲ್ಲಿ ನಡೆಯುವ ಚಟ್ಟಿ ಅಮಾವಾಸ್ಯೆಯ ಜಾತ್ರೆಯು ಬಹಳ ಪ್ರಸಿದ್ಧವಾಗಿದೆ. ಈ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ, ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಭಕ್ತರು ತಮ್ಮ ಹರಕೆಗಳನ್ನು ತೀರಿಸಲು ದೇವರಿಗೆ ಗಂಗನಾ ಮತ್ತು ಅರಿಸಿನ ಬಂಡಾರವನ್ನು ಅರ್ಪಿಸುತ್ತಾರೆ. ಚಟ್ಟಿ ಅಮಾವಾಸ್ಯೆಯ ಸಮಯದಲ್ಲಿ ಅರಿಸಿನ ಬಂಡಾರದ ಮಿಶ್ರಣವನ್ನು ಭಕ್ತರು ಒಬ್ಬರ ಮೇಲೊಬ್ಬರು ಎರಚಿಕೊಳ್ಳುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ. ಈ ಸಮಯದಲ್ಲಿ “ಏಳು ಕೋಟಿ ಏಳು ಕೋಟಿ ಮಲ್ಲಾರ ಮಲ್ಲ” ಎಂಬ ಘೋಷಣೆ ಮುಗಿಲು ಮುಟ್ಟುತ್ತದೆ. ದೂರದೂರುಗಳಿಂದ ಭಕ್ತರು ಕಾಲ್ನಡಿಗೆಯಲ್ಲಿ ಬಂದು ದೇವರ ದರ್ಶನ ಪಡೆಯುತ್ತಾರೆ.
ಈ ದೇವಾಲಯವು ತನ್ನ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯಿಂದಾಗಿ ಮಹತ್ವವನ್ನು ಪಡೆದುಕೊಂಡಿದೆ. ಭಕ್ತರ ನಂಬಿಕೆ ಮತ್ತು ಆಚರಣೆಗಳು ಈ ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸಿವೆ.
ಬಾಗಿಲು ತೆರೆಯುವ ಸಮಯ
06:00 AM IST – 08:00 PM IST
ಬಾಗಿಲು ಮುಚ್ಚುವ ಸಮಯ
08:00 PM IST – 5:30 AM IST
ಉಚಿತ ದರ್ಶನ








