ಭಾರತದ 16 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ Saaksha Tv
ತಮಿಳುನಾಡು : ತಮಿಳುನಾಡು ಮೂಲದ 16 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ತಮಿಳುನಾಡಿನ ಕ್ಯೂ ಬ್ರಾಂಚ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೀನು ಹಿಡಿಯಲೆಂದು 3 ಬೋಟ್ ಗಳ ಮೂಲಕ 16 ಮೀನುಗಾರರು ಸಮುದ್ರಕ್ಕೆ ಇಳದಿದ್ದರು. ಈ ಮೀನುಗಾರರು ತಮಿಳುನಾಡಿನ ರಾಮೇಶ್ವರಂನವರಾಗಿದ್ದಾರೆ. ಈ ಮೀನುಗಾರರನ್ನು ಮಂಗಳವಾರ ಮುಂಜಾನೆ ಶ್ರೀಲಂಕಾ ನೌಕಾಪಡೆ ಬಂಧಿಸಿದ್ದಾರೆ
ಅಲ್ಲದೇ 3 ಬೋಟ್‌ಗಳನ್ನು ಶ್ರೀಲಂಕಾ ನೌಕಾಪಡೆಯು ಡೆಲ್ಫ್ಟ್ ದ್ವೀಪದ ಬಳಿ ಮುಂಜಾನೆ 2 ಗಂಟೆಗೆ ವಶಕ್ಕೆ ಪಡೆದಿದೆ ಎಂದು ಕ್ಯೂ ಬ್ರಾಂಚ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.