ಸಿನಿಮಾ ಪಾಠ ಕಲಿಸಲು ಮುಂದಾದ ಪ್ರಣಯರಾಜ ಶ್ರೀನಾಥ್

1 min read

ಸಿನಿಮಾ ಪಾಠ ಕಲಿಸಲು ಮುಂದಾದ ಪ್ರಣಯರಾಜ ಶ್ರೀನಾಥ್

ಸುಮಾರು 5 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಕಲಾ ಸೇವೆ ಮಾಡಿರುವ ಬಂದಿರುವ ಪ್ರಣಯ ರಾಜ್  ಶ್ರೀನಾಥ್ ಈಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.  ಶ್ರೀನಾಥ್ ಅವರ ಬಹುದಿನದ ಕನಸು ಕನ್ನಡ ಸಿನಿಮಾ ಆಸಕ್ತರಿಗಾಗಿ ಒಂದು ಸಿನಿಮಾ ತರಬೇತಿ ಸಂಸ್ಥೆ ಕಟ್ಟಬೇಕೆನ್ನುವ  ಆಸೆಯನ್ನ ನೆರವೇರಿಸಿಲು ಮುಂದಾಗುತ್ತಿದ್ದಾರೆ.

ಇಷ್ಟು ವರ್ಷಗಳ ಕಾಲ ಕಲಾ ಸೇವೆ ಮಾಡಿದ  ನಂತರವೂ ಇನ್ನಷ್ಟು ಸೇವೆಯನ್ನ ಮಾಡಲು  ಈ ವಯಸ್ಸಿನಲ್ಲೂ ಶ್ರೀನಾಥ್ ಮುಂದೆ ಬಂದಿದ್ದಾರೆ.  ಆರ್ಟ್ ಎನ್ ಯು ಎನ್ನುವ ಸಿನಿಮಾ ಸಂಸ್ಥೆಯನ್ನ ಕಟ್ಟಲು ಧೈರ್ಯ ತೋರಿಸಿದ್ದಾರೆ.  ಈಗಾಗಿ ಸಿನಿಮಾ ತರಬೇತಿ ಸಂಸ್ಥೆಯನ್ನ ಕಟ್ಟಲು ಮುಂದೆ ಬಂದಿದ್ದಾರೆ.

ಸಿನಿಮಾಸಕ್ತರಿಗಾಗಿ ಕಟ್ಟಿದ ಆರ್ಟ್ ಎನ್ ಯು ಸಂಸ್ಥೆಯಲ್ಲಿ  ನಟನೆ, ನಿರ್ದೇಶನ, ಕಥೆ ಹಾಗೂ  ಬರವಣಿಗೆ  ಸಿನಿಮಾ ತಯಾರಿಕೆ  ತಂತ್ರಜ್ಞಾನ  ಧ್ವನಿ  ತರಬೇತಿ  ಸೇರಿದಂತೆ  ಮೇಕಪ್ ಸಂಬಂಧಿಸಿದ ಶಿಕ್ಷಣವನ್ನ ನೀಡಲಾಗುತ್ತಿದೆ.  ಈ ಸಂಸ್ಥೆಯನ್ನ ರಿಯಲ್ ಸ್ಟಾರ್ ಉಪೆಂದ್ರ  ಅವರು ಉದ್ಘಾಟಿಸಬೇಕಿತ್ತು.  ಕಾರಣಂತರಗಳಿಂದ ಸಮಾರಂಭಕ್ಕೆ ಹಾಜರಾಗದ ಕಾರಣ ಧ್ವನಿ ಸಂದೇಶವನ್ನ ಕಳುಹಿಸಿದ್ದಾರೆ  ಶ್ರೀನಾಥ್ ಅವರ ಪ್ರಯತ್ನಕ್ಕೆ ಶುಭವಾಗಲಿ  ಅವರೊಂದಿಗೆ ಸದಾ ನಾನಿರುತ್ತೇನೆ ಎಂದು ತಿಳಿಸಿದ್ದಾರೆ.

 ಶ್ರೀನಾಥ್ ಅವರ  ಪ್ರಯತ್ನಕ್ಕೆ  ಪತ್ನಿ ಗೀತ ಪುತ್ರ ರೋಹಿತ್ ಸೊಸೆ ಮಂಗಳ ಬೆಂಬಲ ನೀಡಿದ್ದಾರೆ. “ ನಾನು ಚಿತ್ರರಂಗಕ್ಕೆ ಬಮದು 50 ವರ್ಷವಾಯಿತು ಸುಮಾರು 40 ರಿಂದ 50  ನಿರ್ದಶಕರ ಜೊತೆ ಕೆಲಸ ಮಾಡಿದ್ದೀನಿ.  ಆಗಿನ ಚಿತ್ರರಂಗವೇ ಬೇರೆ ಈಗಿನ ಚಿತ್ರರಂಗವೆ ಬೇರೆ ಆದರೆ ಕಲಿಕೆ ನಿರಂತರ, ಪುಟ್ಟಣ್ಣ ಕಣಗಲ್ ಅವರೆ ನಮ್ಮ ಗುರುಗಳು ಅವರಿಂದ ಕಲಿತದ್ದು ಸಾಕಷ್ಟು  ಆಗಿನ ಕಾಲ ಈಗಿನ ಕಾಲ ಎನ್ನುವುದಕ್ಕಿಂತ  ವರ್ತಮಾನಕ್ಕೆ ಹೊಂದಿಕೊಳ್ಳಬೇಕು ಎಂದು  ಶ್ರೀನಾಥ್ ಗುರುಗಳನ್ನ ನೆನೆಸಿಕೊಂಡರು.

ನಾನು ಈಗಲೂ ಕಲಿಯುತ್ತಿದ್ದೇನೆ ನಾನು ಕಲಿತದ್ದನ್ನ ಮತ್ತೊಬ್ಬರಿಗೆ ಹೇಳಿಕೊಡುವ ಸದುದ್ದೇಶದಿಂದ  “ ಆರ್ಟ್ ಎನ್ ಯು” ಸಂಸ್ಥೆ ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ. ಈಕಾರ್ಯಕ್ಕೆ  ನನ್ನ ಕುಟುಂಬ ನೀಡುತ್ತಿರುವ ಬೆಂಬಲ ಅಪಾರ ಎಂದು ಶ್ರೀನಾಥ್ ಹೇಳಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd