ಅಮೀರ್ ಖಾನ್ ದಂಗಲ್ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದ ‘ಪಠಾನ್’ ಚಿತ್ರ……
ಸೋತು ಸೊರಗಿದ್ದ ಬಾಲಿವುಡ್ ಚಿತ್ರರಂಗಕ್ಕೆ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ‘ಪಠಾನ್’ ಚಿತ್ರದ ಗೆಲುವು ಹೊಸ ಉತ್ಸಾಹ ನೀಡಿದೆ. ಹಲವು ಚಿತ್ರಗಳ ರೆಕಾರ್ಡ್ ನ್ನ ಬ್ರೇಕ್ ಮಾಡುತ್ತಾ ಮುನ್ನುಗ್ಗುತ್ತಿದೆ. ಪಠಾಣ್ ಚಿತ್ರ ಕೇವಲ ಹತ್ತು ದಿನಗಳಲ್ಲಿ ವಿಶ್ವದಾದ್ಯಂತ ₹729 ಕೋಟಿ ಕಲೆಕ್ಷನ್ ಮಾಡುವ ಮೂಲಕ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರದ ಸಾರ್ವಕಾಲಿಕ ದಾಖಲೆಯನ್ನ ಅಳಿಸಿ ಹಾಕಿದೆ.
ಯಶ್ ರಾಜ್ ಫಿಲ್ಮ್ಸ್ (YRF) ಹಂಚಿಕೊಂಡಿರುವ ಪೋಸ್ಟ್ ಪ್ರಕಾರ ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರ ಹತ್ತು ದಿನಗಳಲ್ಲಿ ಭಾರತದಲ್ಲಿ ಒಟ್ಟು ₹ 453 ಕೋಟಿಯನ್ನ ಕಲೆಕ್ಷನ್ ಮಾಡಿದೆ. ವಿದೇಶಗಳಲ್ಲಿ ಈ ಚಿತ್ರ ₹276 ಕೋಟಿ ಸಂಗ್ರಹಿಸಿದೆ. ವಿಶ್ವದಾದ್ಯಂತ ಒಟ್ಟು ಕಲೆಕ್ಷನ್ ₹729 ಕೋಟಿ ದಾಟಿದೆ.
ನಾಲ್ಕು ವರ್ಷಗಳ ನಂತರ ಶಾರುಖ್ ಖಾನ್ “ಪಠಾನ್” ಬಿಗ್ ಸ್ಕ್ರೀನ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ “ಏಕ್ ಥಾ ಟೈಗರ್” ಮತ್ತು “ಟೈಗರ್ ಜಿಂದಾ ಹೈ”, ಮತ್ತು ಹೃತಿಕ್ ರೋಷನ್ ಒಳಗೊಂಡ “ವಾರ್” ನಂತರ ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಸ್ಪೈ ಯೂನಿವರ್ಸ್ನಲ್ಲಿ ಬಿಡುಗಡೆಯಾಗುತ್ತಿರು ನಾಲ್ಕನೇ ಚಿತ್ರ ಇದಾಗಿದೆ.
ಪಠಾಣ್ ಬಿಡುಗಡೆಗೂ ಮುನ್ನ ಚಿತ್ರದ ಬೇಷಾರಾಂ ರಂಗ್ ಹಾಡು ವಿವಾದಕ್ಕೆ ಕಾರಣವಾಗಿತ್ತು. ಸಮಾಜಿಕ ಜಾಲತಾಣದಲ್ಲಿ ಇದರ ವಿರುದ್ಧ ಬಾಯ್ ಕಟ್ ಟ್ರೆಂಡ್ ಕೇಳಿ ಬಂದಿತ್ತು. ಚಿತ್ರದ ನಿರ್ಮಾಪಕರು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿದ್ದಾರೆ ಹಲವಡೆ ವಿವಾದ ಸೃಷ್ಟಿಯಾಗಿತ್ತು. ಇದೀಗ ಚಿತ್ರ ಎಲ್ಲಾ ಅಡೆತಡೆಗಳನ್ನ ಎದುರಿಸಿ ಗೆದ್ದು ಬಂದಿದೆ…
SRK’s Pathaan overtakes Aamir’s Dangal, becomes Bollywood’s all-time megahit