RRR ಗೆ ಆಸ್ಕರ್ ಬೇಕು – ಅಭಿಯಾನ ಶುರು ಮಾಡಿದ ಫ್ಯಾನ್ಸ್….
ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ ಸಿನಿಮಾಗಳಾಗಿದ್ದ RRR ಅಥವ The Kashmir Fiels ಭಾರತದಿಂದ ಆಸ್ಕರ್ ಗೆ ಆಯ್ಜೆಯಾಗಲಿದೆ ಎಂದು ಊಹಿಸಲಾಗಿತ್ತು.. ಇದಕ್ಕಾಗಿ ಅಭಿಯಾನಗಳೂ ನಡೆದಿದ್ದವಾದ್ರೆ , ಯಾರೂ ನಿರೀಕ್ಷೆಯೇ ಮಾಡದ ಗುಜರಾತಿ ಸಿನಿಮಾ ಛೆಲ್ಲೋ ಶೋ ಆಯ್ಕೆಯಾಗಿತ್ತು.. ಆದ್ರೆ ಜ್ಯೂರಿಗಳ ಆಯ್ಕೆಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು.. ಆಕ್ರೋಶ ಭುಗಿಲೆದ್ದಿತ್ತು..
ಇಟಾಲಿಯನ್ ರೀಮೇಕ್ ಸಿನಿಮಾ ಛೇಲ್ಲೋ ಶೋ ಆಸ್ಕರ್ಸ್ ಗೆ ಕಳುಹಿಸಿದಕ್ಕೆ ಟೀಕೆಗಳು ವ್ಯಕ್ತವಾಗಿತ್ತು.. RRR ಆಸ್ಕರ್ಸ್ ಗೆ ಆಯ್ಕೆಯಾಗುವ ಕನಸು ಕಂಡಿದ್ದ ಅಭಿಮಾನಿಗಳಿಗೂ ಬೇಸರವಾಗಿತ್ತು.. ಆದ್ರೆ ಆದರೆ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು RRR ಬೆಂಬಲಕ್ಕೆ ನಿಂತಿದ್ದಾರೆ.. ಸಿನಿಮಾಗೆ ಆಸ್ಕರ್ ನಾಮಿನೇಷನ್ ದೊರಕಿಸುವ ಯತ್ನದಲ್ಲಿ ಶುರುವಾಗಿರುವ ಅಭಿಯಾನದಲ್ಲಿ ಭಾಗಿಯಾಗುತ್ತಿದ್ದಾರೆ.
RRR ಸಿನಿಮಾ ಭಾರತದಿಂದ ಅಧಿಕೃತವಾಗಿ ಆಸ್ಕರ್ ಗೆ ಆಯ್ಕೆ ಆಗಿಲ್ಲ.. ಆದ್ರೂ ಇನ್ನೂ ಆಸ್ಕರ್ ಪ್ರವೇಶಕ್ಕೆ ಅವಕಾಶ ಇದೆ. RRR ಅನ್ನು ಆಸ್ಕರ್ ಗೆ ಪರಿಗಣಿಸಬೇಕು ಎಂದು ದೊಡ್ಡ ಮಟ್ಟದ ಅಭಿಯಾನ ಆರಂಭವಾಗಿದೆ.. ಸುಮಾರು 15 ವಿಭಾಗಗಳಲ್ಲಿ RRR ಅನ್ನು ಆಸ್ಕರ್ ಗೆ ಪರಿಗಣಿಸಲು ಕೋರಿಕೆಯಿಡಲಾಗಿದೆ…
RRR ಸಿನಿಮಾದ ಆಸ್ಕರ್ ಅಭಿಯಾನ ಆರಂಭವಾಗಿದೆ.. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಮೂಲ ಚಿತ್ರಕತೆ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಹಾಡು, ಅತ್ಯುತ್ತಮ ಸಿನಿಮಾಟೊಗ್ರಫಿ, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್, ಅತ್ಯುತ್ತಮ ವಸ್ತ್ರವಿನ್ಯಾಸ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಕೇಶವಿನ್ಯಾಸ, ಅತ್ಯುತ್ತಮ ಧ್ವನಿ ಗ್ರಹಣ, ಅತ್ಯುತ್ತಮ ವಿಶ್ಯುಲ್ ಎಫೆಕ್ಟ್ ವಿಭಾಗದಲ್ಲಿ RRR ಅನ್ನು ಆಸ್ಕರ್ ಗೆ ಪರಿಗಣಿಸುವಂತೆ ಅಭಿಯಾನ ಆರಂಭಿಸಲಾಗಿದೆ.
SS Rajamouli RRR ‘s Oscar journey begins, makers submit Jr NTR, Ram Charan’s film in 14 categories