ಬೆಂಗಳೂರು: ಸರ್ಕಾರದ ಗ್ಯಾರಂಟಿಯಲ್ಲಿ ಒಂದಾಗಿರುವ ಅನ್ನ ಭಾಗ್ಯ ಹಾಗೂ ಗೃಹಜ್ಯೋತಿ ಸ್ಕೀಮ್(Gruha Jyothi) ಜೂನ್ 30ರ ತಡರಾತ್ರಿಯಿಂದಲೇ ಅಧಿಕೃತವಾಗಿ ಆರಂಭವಾಗಿದೆ. ರಾತ್ರಿ 12 ಗಂಟೆಯಿಂದಲೇ ಪ್ರತಿ ಯುನಿಟ್ ಕೌಂಟ್ ಆರಂಭವಾಗಿದೆ. ಜುಲೈ ತಿಂಗಳ ಬಿಲ್ ಬರುವ ಮುನ್ನ ಅರ್ಜಿ ಸಲ್ಲಿಸದಿದ್ದರೆ ಜುಲೈ ತಿಂಗಳ ಬಿಲ್ ಕಟ್ಟಬೇಕಾಗುತದೆ.
ಜುಲೈ 01ರಿಂದ ಗೃಹಜ್ಯೋತಿ ಸ್ಕೀಮ್ ಅಧಿಕೃತವಾಗಿ ಆರಂಭವಾಗಿದ್ದು, 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ ಸ್ಕೀಮ್ ಕೌಂಟ್ ಆಗಲಿದೆ. ಇನ್ನು ಗೃಹಜ್ಯೋತಿ ಯೋಜನೆಯ ಪ್ರಕಾರ 12 ತಿಂಗಳ ಸರಾಸರಿ ಬಳಕೆ 187 ಯುನಿಟ್ ಇದ್ದರೂ ಫ್ರಿ ವಿದ್ಯುತ್ ಸಿಗಲಿದೆ. 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದ್ದು, 12 ತಿಂಗಳ ಸರಾಸರಿಯ ಬಿಲ್ ನಲ್ಲಿ 187 ಯುನಿಟ್ ಬಂದ್ರು 10% ಸರಾಸರಿ ನೀಡಲಾಗುತ್ತದೆ. ತದನಂತರ 200 ಯುನಿಟ್ ಮೇಲೆ 10 ಯುನಿಟ್ ಜಾಸ್ತಿ ಬಂದರೂ ಬಿಲ್ ನೀಡಲಾಗುತ್ತದೆ.
ಈ ಗೃಹಜ್ಯೋತಿ ಸ್ಕೀಮ್ ಆಗಸ್ಟ್ ತಿಂಗಳಿನಿಂದ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದ್ದು, ಸದ್ಯ ಜೂನ್ ತಿಂಗಳ ಬಿಲ್ ಜುಲೈ ತಿಂಗಳಿನಲ್ಲಿ ಬರಲಿದೆ. ರಾಜ್ಯದಲ್ಲಿ ಒಟ್ಟು ಗೃಹಜ್ಯೋತಿಯ ಫಲಾನುಭವಿಗಳು 2.14 ಕೋಟಿಯಷ್ಟು ಜನರಿದ್ದು, ಗೃಹಜ್ಯೋತಿಗೆ 80,99,932 ರಷ್ಟು ಜನರು ನೋಂದಣಿ ಮಾಡಿದ್ದಾರೆ. ಇನ್ನು 1,33,00,068 ಕೋಟಿಯಷ್ಟು ಜನ ನೋಂದಣಿಗೆ ಅರ್ಜಿ ಹಾಕಬೇಕು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರದಾರರ ಕುಟುಂಬದ ಪ್ರತಿಯೊಬ್ಬರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿತ್ತು. ಆದರೆ ಈಗ ಅಗತ್ಯ ಪ್ರಮಾಣದ ಅಕ್ಕಿ ಸಿಕ್ಕಿಲ್ಲ. ಹೀಗಾಗಿ 5 ಕೆಜಿ ಅಕ್ಕಿ ಹಾಗೂ ಬಾಕಿ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಸರ್ಕಾರ ತಿಳಿಸಿದೆ.
ಕೆಜಿಗೆ 34 ರೂ. ಲೆಕ್ಕದಲ್ಲಿ ತಲಾ ಒಬ್ಬರಿಗೆ 170 ರೂಪಾಯಿ ಸಿಗಲಿದೆ. ಬಿಪಿಎಲ್ ಕಾರ್ಡ್ದಾರರ ಅಕೌಂಟ್‌ಗೆ ದುಡ್ಡು ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಅನ್ನಭಾಗ್ಯದ ದುಡ್ಡು ಬಿಪಿಎಲ್ ಕಾರ್ಡ್ದಾರರ ಖಾತೆಗೆ ಬೀಳಲು ಷರತ್ತುಗಳು ಅನ್ವಯವಾಗಲಿದೆ.






