ಅಸ್ತಂಗತವಾದ ಇಂಗ್ಲೆಂಡಿನ ಕೊಹಿನೂರು ರಾಣಿ ಎಲಿಜಬೆತ್ II
ಅಂತ್ಯಸಂಸ್ಕಾರದಲ್ಲಿ ಭಾರತದ ಅಧ್ಯಕ್ಷೆ ಮುರ್ಮು ಭಾಗಿ.
State Funeral of Queen Elizabeth II.
ಲಂಡನ್: ಮೂರು ದಿನಗಳ ಭೇಟಿಗಾಗಿ ಲಂಡನ್‌ನಲ್ಲಿರುವ ನಮ್ಮ ದೇಶದ ಅಧ್ಯಕ್ಷ ದ್ರೌಪದಿ ಮುರ್ಮು ಅವರು ಇವತ್ತು ಸೋಮವಾರ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆಯುತಿರುವ ರಾಣಿ ಎಲಿಜಬೆತ್ II ಅವರ ಅಂತಿಮ ಸಂಸ್ಕಾರದಲ್ಲಿ ಭಾರತ ಸರ್ಕಾರದ ಪಾಲ್ಗೊಳ್ಳಲು ಆಗಮಿಸಿದರು.
https://twitter.com/rashtrapatibhvn/status/1571465015168995329?ref_src=twsrc%5Etfw%7Ctwcamp%5Etweetembed%7Ctwterm%5E1571465015168995329%7Ctwgr%5E8a6c6c2c03e267f6f57d84b8612123542046e35d%7Ctwcon%5Es1_&ref_url=https%3A%2F%2Fwww.ndtv.com%2Findia-news%2Fwatch-president-droupadi-murmu-in-uk-to-attend-queens-funeral-3355540
ಈ ಬಗ್ಗೆ ತನ್ನ ಟ್ವಿಟ್ಟರ್ ನಲ್ಲಿ ರಾಷ್ಟ್ರಪತಿಯವರು ತಮ್ಮ ಪರವಾಗಿ ಮತ್ತು ಭಾರತದ ಜನರ ಪರವಾಗಿ ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು ಎಂದು ತಿಳಿಸಿದ್ದಾರೆ..
ಸೆಪ್ಟೆಂಬರ್ 8 ರಂದು ಸ್ಕಾಟ್‌ಲ್ಯಾಂಡ್‌ನಲ್ಲಿ 96 ನೇ ವಯಸ್ಸಿನಲ್ಲಿ ನಿಧನರಾದ ಇಂಗ್ಲೆಂಡ್ ರಾಣಿ ಎಲಿಜಬೆತ್ II ಅವರಿಗೆ ಭಾರತದ ನೂತನ ಅಧ್ಯಕ್ಷ ಮುರ್ಮು ಅವರು ಭಾನುವಾರ ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ಗೌರವ ಸಲ್ಲಿಸಿ ರಾಣಿ ಎಲಿಜಬೆತ್ II ರ ನೆನಪಿಗಾಗಿ ಲ್ಯಾಂಕಾಸ್ಟರ್ ಹೌಸ್ , ಲಂಡನ್ನಲ್ಲಿ ಸಂತಾಪ ಸೂಚಕ ಪುಸ್ತಕಕ್ಕೆ ಸಹಿ ಹಾಕಿದರು.
https://twitter.com/rashtrapatibhvn/status/1571479944773115907
ಶನಿವಾರ ಸಂಜೆ ಆಗಮಿಸಿದ ದ್ರೌಪದಿ ಮುರ್ಮು ಇವರ ಜೊತೆ ವಿವಿಧ ದೇಶದ ಸುಮಾರು 500 ನಾಯಕರು ಮತ್ತು ರಾಜಮನೆತನದ 2,000 ಮಂದಿಯ ಅಬ್ಬೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದರು. ಸೋಮವಾರದ ಅಂತ್ಯಕ್ರಿಯೆಯ ಸೇವೆಗೆ ಮುಂಚಿತವಾಗಿ, ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕಾನ್ಸೋರ್ಟ್ ಕ್ಯಾಮಿಲ್ಲಾ ಆಯೋಜಿಸಿದ ಸ್ವಾಗತಕ್ಕೆ ಅಧ್ಯಕ್ಷರನ್ನು ಆಹ್ವಾನಿಸಲಾಗಿದೆ.
https://twitter.com/rashtrapatibhvn/status/1571712367616204801
ಇಂದು ಸಕಲ ಸರಕಾರಿ ಮರ್ಯಾದೆಯೊಂದಿಗೆ ಬ್ರಿಟನ್ ರಾಣಿಯ ಅಂತ್ಯ ಸಂಸ್ಕಾರದ ವಿಧಿ ವಿಧಾನ ನಡೆಯಲಿದ್ದು ಇಂಗ್ಲೆಂಡ್ ಸಕಲ ರೀತಿಯಲ್ಲೂ ಸನ್ನದ್ಧವಾಗಿದೆ.








