ಜನ ಶಕ್ತಿಯ ಅಂಕುಶದಲ್ಲಿ ರಾಜ್ಯ ಶಕ್ತಿ ಇರಬೇಕು : ಸಿದ್ದರಾಮಯ್ಯ Siddaramaiah saaksha tv
ಬೆಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಯುತ ಹೋರಾಟಕ್ಕೆ ಯಾವ ಸರ್ಕಾರವಾದರೂ ಮಣಿಯಲೇ ಬೇಕು. ಜನ ಶಕ್ತಿಯ ಅಂಕುಶದಲ್ಲಿ ರಾಜ್ಯ ಶಕ್ತಿ ಇರಬೇಕಾಗುತ್ತದೆ. ಇದೇ ಪ್ರಜಾಪ್ರಭುತ್ವ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾನತಾಡಿದ ಅವರು, ಕರಾಳ ಕಾಯ್ದೆಗಳನ್ನು ಮೊದಲೇ ಹಿಪಡೆದಿದ್ದರೆ 700 ಅನ್ನದಾತರ ಜೀವ ಉಳಿಸಬಹುದಿತ್ತು.
ಈ ಸಾವುಗಳಿಗೆ ನರೇಂದ್ರ ಮೋದಿಯವರ ಸರ್ಕಾರವೇ ನೇರ ಹೊಣೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಯುತ ಹೋರಾಟಕ್ಕೆ ಯಾವ ಸರ್ಕಾರವಾದರೂ ಮಣಿಯಲೇ ಬೇಕು. ಜನ ಶಕ್ತಿಯ ಅಂಕುಶದಲ್ಲಿ ರಾಜ್ಯ ಶಕ್ತಿ ಇರಬೇಕಾಗುತ್ತದೆ. ಇದೇ ಪ್ರಜಾಪ್ರಭುತ್ವ ಎಂದರು.
ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಜನಸಾಮಾನ್ಯರು ಜೀವನ ನಡೆಸುವುದೇ ದುಸ್ಥರವಾಗಿದೆ.
ಇದನ್ನು ಪ್ರಶ್ನಿಸಿದವರಿಗೆ ದೇಶ ದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟುತ್ತಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇನ್ನು ‘ಜನ ಜಾಗೃತಿ ಅಭಿಯಾನ’ದ ಮೂಲಕ ಕೇಂದ್ರ – ರಾಜ್ಯ ಬಿಜೆಪಿ ಸರ್ಕಾರಗಳ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು
. ಮೋದಿಯವರ ಆಡಳಿತದಲ್ಲಿ ಕಾಪೆರ್Çೀರೇಟ್ ಸಂಸ್ಥೆಗಳಿಗೆ ಮಾತ್ರ ಹಣ, ಆಸ್ತಿ ಮಾಡಲು ಅವಕಾಶವಿದೆ. ಆದರೆ ಜನ ಸಾಮಾನ್ಯರು ನೆಮ್ಮದಿಯಿಂದ ಬದಕಲು ಸಾಧ್ಯವೇ ಇಲ್ಲದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.