ಸೆಪ್ಟೆಂಬರ್ 1ರ ಮಧ್ಯರಾತ್ರಿಯಿಂದಲೇ ರಾಷ್ಟ್ರ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರ ಏರಿಕೆ ಮಾಡಿದೆ.
ಕಾರು – 50 ರಿಂದ 55 ರೂ. ಗೆ ಹೆಚ್ಚಳ. ಲಘು ಮೋಟಾರು ವಾಹನಳು- 90 ರಿಂದ 100 ರೂ., ಬಸ್, ಟ್ರಕ್ಗಳು – 185 ರಿಂದ 200 ರೂ.ಗೆಏರಿಕೆ.
ಮಲ್ಟಿ ಆಕ್ಸಲ್ ವೆಹಿಕಲ್, ಬೃಹತ್ ನಿರ್ಮಾಣ ಯಂತ್ರೋಪಕರಣ ಅಥವಾ ಅರ್ಥ್ ಮೂವಿಂಗ್ ಸಾಧನಗಳಿಗೆ 320 ರಿಂದ 485ರೂ.ಗೆ ಏರಿಕೆ ಮಾಡಲಾಗಿದೆ. ಕಾರು, ವ್ಯಾನ್, ಜೀಪ್, ಎಲ್ಎಂವಿ ವಾಹನಗಳಿಗೆ ತಿಂಗಳಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ದರ 1720 ರೂ. ಲಘು ವಾಣಿಜ್ಯ ವಾಹನ ಅಂದರೇ ಎಲ್ಎಂವಿಗಳಿಗೆ 3005 ರೂ., ಟ್ರಕ್, ಬಸ್ಗಳಿಗೆ 6010 ರೂಪಾಯಿ, ಮಲ್ಟಿ ಆಕ್ಸಲ್ ವೆಹಿಕಲ್ಗಳಿಗೆ ತಿಂಗಳಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ದರ 9665 ರೂ. ನಿಗದಿಪಡಿಸಲಾಗಿದೆ.