ಷೇರುಪೇಟೆ – ಬುಧವಾರ ಸೆನ್ಸೆಕ್ಸ್ 574 ನಿಫ್ಟಿ 178 ಪಾಯಿಂಟ್ ಏರಿಕೆಯೊಂದಿಗೆ ಮಕ್ತಾಯ
ಷೇರುಪೇಟೆಯ ಮೂರನೇ ವಹಿವಾಟಿನ ದಿನವಾದ ಬುಧವಾರ,ಮಾರುಕಟ್ಟೆಯು ಏರಿಕೆಯೊಂದಿಗೆ ಪ್ರಾರಂಭವಾಗಿ ಒಂದು ದಿನದ ವಹಿವಾಟಿನ ನಂತರ ಹಸಿರು ಮಾರ್ಕ್ನಲ್ಲಿ ಕೊನೆಗೊಂಡಿದೆ. ಬಿಎಸ್ಇ ಸೆನ್ಸೆಕ್ಸ್ 574 ಪಾಯಿಂಟ್ಗಳು ಅಥವಾ 1.02 ರಷ್ಟು ಏರಿಕೆಯಾಗಿ 57,037 ಕ್ಕೆ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ 178 ಪಾಯಿಂಟ್ ಅಥವಾ 1.05 ರಷ್ಟು ಗಳಿಸಿ 17,136 ಕ್ಕೆ ಕೊನೆಗೊಂಡಿತು.
ಮಿಶ್ರ ಜಾಗತಿಕ ಸೂಚನೆಗಳ ನಡುವೆ ಭಾರತೀಯ ಸೂಚ್ಯಂಕಗಳು ಹಸಿರು ಮಾರ್ಕ್ನಲ್ಲಿ ಓಪನ್ ಆಗಿವೆ. ಮುಂಬೈ ಷೇರುಪೇಟೆಯ 30-ಷೇರುಗಳ ಸೆನ್ಸೆಕ್ಸ್ ಸೂಚ್ಯಂಕವು 214 ಪಾಯಿಂಟ್ಗಳು ಅಥವಾ 0.38 ರಷ್ಟು ಏರಿಕೆಯಾಗಿ 56,677 ಕ್ಕೆ ಪ್ರಾರಂಭವಾಯಿತು, ಆದರೆ ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಸೂಚ್ಯಂಕ 57 ಪಾಯಿಂಟ್ಗಳು ಅಥವಾ 0.34 ರಷ್ಟು ಏರಿಕೆಯಾಗಿ 17,016 ಕ್ಕೆ ಪ್ರಾರಂಭವಾಯಿತು.
ಮಂಗಳವಾರ, ಷೇರು ಮಾರುಕಟ್ಟೆ ಏರಿಕೆಯೊಂದಿಗೆ ಪ್ರಾರಂಭವಾಗಿತ್ತು. ಆದರೆ ಒಂದು ದಿನದ ಅಸ್ಥಿರ ವಹಿವಾಟಿನ ನಂತರ ಅದು ಕೊನೆಯಲ್ಲಿ ತೀವ್ರ ಕುಸಿತದೊಂದಿಗೆ ಕ್ಲೋಸ್ ಆಗಿತ್ತು. ಬಿಎಸ್ಇ ಸೆನ್ಸೆಕ್ಸ್ 703 ಅಂಕಗಳು ಅಥವಾ ಶೇಕಡಾ 1.23 ರಷ್ಟು ಕುಸಿದು 56,463 ಕ್ಕೆ ಕೊನೆಗೊಂಡಿದೆ. ಮತ್ತೊಂದೆಡೆ, ಎನ್ಎಸ್ಇ ನಿಫ್ಟಿ ಸೂಚ್ಯಂಕ 215 ಪಾಯಿಂಟ್ಗಳು ಅಥವಾ ಶೇಕಡಾ 1.25 ರಷ್ಟು ಕುಸಿದು 16,958 ಕ್ಕೆ ತಲುಪಿದೆ.