ರಾಂಚಿ : ಟೆಸ್ಟ್ ಕ್ರಿಕೆಟ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಭಾರತ ತಂಡದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ 14 ಮೇಲಕ್ಕೆ ಜಿಗಿದು ಟಾಪ್ 20ರಲ್ಲಿ ಸ್ಥಾನ ಪೆಡದಿದ್ದಾರೆ.
29ನೇ ಸ್ಥಾನದಲ್ಲಿದ್ದ 22 ವರ್ಷದ ಯಶಸ್ವಿ ಜೈಸ್ವಾಲ್ 699 ಅಂಕಗಳೊಂದಿಗೆ 14 ಸ್ಥಾನ ಮೇಲಕ್ಕೆ ಜಿಗಿದು 15ನೇ ಸ್ಥಾನ ಪಡೆದಿದ್ದಾರೆ. 12ನೇ ಸ್ಥಾನದಲ್ಲಿದ್ದ ರಿಷಭ್ ಪಂತ್ 706 ಅಂಕಗಳೊಂದಿಗೆ 14ನೇ ಸ್ಥಾನಕ್ಕೆ ಕುಸಿದಿದ್ದಾರೆ. 13ನೇ ಸ್ಥಾನದಲ್ಲಿದ್ದ ನಾಯಕ ರೋಹಿತ್ ಶರ್ಮಾ 12ನೇ ಸ್ಥಾನಕ್ಕೆ ಏರಿದ್ದಾರೆ. ಆದರೆ, ಟಾಪ್ 10ರಲ್ಲಿ ಕೊಹ್ಲಿ ಬಿಟ್ಟು ಬೇರೆ ಯಾರೂ ಕೂಡ ಸ್ಥಾನ ಪಡೆದಿಲ್ಲ.
752 ಅಂಕ ಗಳಿಸಿರುವ ವಿರಾಟ್ 7ನೇ ಸ್ಥಾನದಲ್ಲಿದ್ದರೆ, 893 ಅಂಕ ಪಡೆದಿರುವ ಕಿವೀಸ್ನ ಕೇನ್ ವಿಲಿಯಮ್ಸನ್ ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸಿ ಮಿಂಚುತ್ತಿರುವ ಜೈಸ್ವಾಲ್, ಸದ್ಯದಲ್ಲಿಯೇ ಕೊಹ್ಲಿ ಅವರ ಅಪರೂಪದ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್ ಸದ್ಯ 2023-25ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಲ್ಲಿ ಟಾಪ್ ನಲ್ಲಿ ಉಳಿದುಕೊಂಡಿದ್ದಾರೆ. ಅತಿ ಹೆಚ್ಚು ಸ್ಕೋರರ್, ಉತ್ತಮ ಸರಾಸರಿ, ಅತಿಹೆಚ್ಚು ರನ್, ಅತಿಹೆಚ್ಚು ಸ್ಟ್ರೈಕ್ರೇಟ್, ಹೆಚ್ಚು ಬಾರಿ 50ಕ್ಕೂ ಅಧಿಕ ರನ್ , ಹೆಚ್ಚು ಬಾರಿ ಶತಕ, ಹೆಚ್ಚು ಬೌಂಡರಿ, ಹೆಚ್ಚು ಸಿಕ್ಸರ್ ಬಾರಿಸಿದವರು ಪಟ್ಟಿಯಲ್ಲಿ ಯುವ ಆಟಗಾರ ಮುಂಚೂಣಿಯಲ್ಲಿದ್ದಾರೆ.