ಟಿವಿ ನೋಡಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ.
18 ವರ್ಷದ ಯುವತಿ ಮನಿಷಾ ನೇಣಿಗೆ ಶರಣಾಗಿದ್ದಾಳೆ. ಬುದ್ಧಿ ಹೇಳಿದ ನಂತರ ರಾತ್ರಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ, ದುಪಟ್ಟಾ ಸಹಾಯದಿಂದ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಾಲಕಿ ನೇಣು ಬಿಗಿದುಕೊಂಡಿದ್ದ ಕೊಠಡಿಯಿಂದ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನ್ನ ತಾಯಿ ನಿಂದಿಸಿದ್ದರಿಂದ ತೀವ್ರ ಹೆಜ್ಜೆ ಇಡುತ್ತಿರುವುದಾಗಿ ಬರೆದಿದ್ದಾಳೆ. ತಡರಾತ್ರಿ ಮನೀಶಾ ಟಿವಿ ನೋಡುತ್ತಿದ್ದಳು, ಇದರಿಂದ ಕೋಪಗೊಂಡ ಆಕೆಯ ತಾಯಿ ಆಕೆಯನ್ನು ಗದರಿಸಲಾಗಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.