Sukma Encounter : ನಕ್ಸಲ್ ಮತ್ತು ಯೋಧರ ನಡುವೆ ಗುಂಡಿನ ಚಕಮಕಿ -6 ನಕ್ಸಲರು 2 ಯೋಧರಿಗೆ ಗಾಯ..
ಛತ್ತೀಸ್‌ಗಢದ ಸುಕ್ಮಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾರೀ ಎನ್‌ಕೌಂಟರ್ ನಡೆದಿರುವ ಬಗ್ಗೆ ವರದಿಯಾಗಿದೆ. ಮಾವೋವಾದಿಗಳಿಗಾಗಿ ಕೋಬ್ರಾ ಮತ್ತು ಎಸ್‌ಟಿಎಫ್ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ.
ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಎನ್‌ಕೌಂಟರ್‌ನಲ್ಲಿ ಆರು ಮಾವೋವಾದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿ ಕೋಬ್ರಾ ಬೆಟಾಲಿಯನ್‌ನ ಇಬ್ಬರು ಕಮಾಂಡೋಗಳು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳು ಸ್ಥಳದಿಂದ ಬೃಹತ್ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಸುಕ್ಮಾ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳ ಶೋಧ ಕಾರ್ಯ ಇನ್ನೂ ಮುಂದುವರೆದಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಕೋಬ್ರಾದ 202ನೇ ಮತ್ತು 208ನೇ ಬೆಟಾಲಿಯನ್‌ಗಳ ಕಮಾಂಡೋಗಳು ಎನ್‌ಕೌಂಟರ್‌ನಲ್ಲಿ ಪಾಲ್ಗೊಂಡಿದ್ದರು.ಸುಮಾರು 45 ನಿಮಿಷಗಳ ಗುಂಡಿನ ಚಕಮಕಿ ನಡೆದಿದೆ. ಛತ್ತೀಸ್‌ಗಢದಲ್ಲಿ ಆಗಾಗ ಎನ್‌ಕೌಂಟರ್‌ಗಳು ನಡೆಯುತ್ತಿರುತ್ತವೆ. ಈ ಹಿಂದೆಯೂ ರಾಜ್ಯದಲ್ಲಿ ಹಲವು ಎನ್‌ಕೌಂಟರ್‌ಗಳ ನಡೆದಿದ್ದೂ, ಪೊಲೀಸರು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಹಲವು ಪೊಲೀಸರು ಮತ್ತು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.
Sukma Encounter : Gunfight between Naxals and soldiers – 6 Naxals injured 2 soldiers..