ಬೆಂಗಳೂರು: ಭಾನುವಾರವೂ ರಾಜ್ಯ ರಾಜಧಾನಿ ಬೆಂಗಳೂರು ಮಹಾಮಾರಿ ಕೊರೊನಾ ಅಬ್ಬರಕ್ಕೆ ನಲುಗಿದೆ. ಇಂದು ಬೆಳಿಗ್ಗೆ 10 ಗಂಟೆ ಹೊತ್ತಿಗೆ 129 ಮಂದಿಗೆ ಕೊರೊನಾ ವಕ್ಕರಿದ್ದು. ಎಎಸ್‌ಐ ಒಬ್ಬರನ್ನು ಬಲಿ ಪಡೆದಿದೆ.
ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಎಎಸ್‌ಐ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸ ಫಲಿಸದೆ ಮೃತಪಟ್ಟಿದ್ದಾರೆ. ಜತೆಗೆ ಎಎಸ್‌ಐ ಸೇರಿದಂತೆ ನಾಲ್ವರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ.
ಬೆಳ್ಳಂದೂರು ಪೊಲೀಸ್ ಠಾಣೆಯ ಮಹಿಳಾ ಮುಖ್ಯಪೇದೆಗೆ ಕೊರೊನಾ ಪಾಸಿಟಿವ್ ಬಂದದೆ. ಈ ಹಿನ್ನೆಲೆಯಲ್ಲಿ ಬೆಳ್ಳಂದೂರು ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಸೋಂಕಿತ ಪೊಲೀಸ್ ಸಿಬ್ಬಂದಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರ್ಪೋರೇಟರ್‌ಗೆ ಕೊರೊನಾ..!
ಬೆಂಗಳೂರಿನ ಮತ್ತೊಬ್ಬ ಕಾರ್ಪೋರೇಟರ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಜೆ.ಜೆ ನಗರ ವಾರ್ಡ್ ನ ಕಾರ್ಪೋರೇಟರ್ ಸೀಮಾ ಅಲ್ತಾಫ್‌ಗೆ ವಕ್ಕರಿಸಿದ್ದು, ವಿಕ್ಟೋರಿತಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೀಮಾ ಅಲ್ತಾಫ್ ಕುಟುಂಬದ 14 ಮಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.