IPL 2022 : ಹಾರ್ಧಿಕ್ ಟೀಂ ಇಂಡಿಯಾದ ಕ್ಯಾಪ್ಟನ್ ಆಗೋದು ಪಕ್ಕಾ
ಚೊಚ್ಚಲ ಪ್ರಯತ್ನದಲ್ಲಿಯೇ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಹಾರ್ದಿಕ್ ಪಾಂಡ್ಯ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಹಾರ್ದಿಕ್ ಅತ್ಯುತ್ತಮ ನಾಯಕತ್ವ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಗವಾಸ್ಕರ್ ಶ್ಲಾಘಿಸಿದ್ದಾರೆ
ಐಪಿಎಲ್-2022ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ಯಶಸ್ಸು ಕಂಡಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಹಾರ್ಧಿಕ್ ಪಾಂಡ್ಯ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಲೀಗ್ ಹಂತದಲ್ಲಿ 14 ಪಂದ್ಯಗಳ ಪೈಕಿ 10 ಮ್ಯಾಚ್ ಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಇದಲ್ಲದೇ ಹಾರ್ದಿಕ್ ಈ ಋತುವಿನಲ್ಲಿ ಬೌಲ್ ಮತ್ತು ಬ್ಯಾಟ್ ನಲ್ಲೂ ಮಿಂಚಿದ್ದಾರೆ. 15 ಪಂದ್ಯಗಳನ್ನಾಡಿರುವ ಹಾರ್ದಿಕ್ 487 ರನ್ ಗಳಿಸಿ 8 ವಿಕೆಟ್ ಪಡೆದಿದ್ದಾರೆ.
ಪಾಂಡ್ಯಗೆ ಟೀಂ ಇಂಡಿಯಾ ನಾಯಕತ್ವದ ಅವಕಾಶಗಳ ಕುರಿತು ಮಾತನಾಡಿದ ಗವಾಸ್ಕರ್, ಹಾರ್ದಿಕ್ ಖಂಡಿತವಾಗಿಯೂ ಭಾರತ ತಂಡದ ನಾಯಕರಾಗುತ್ತಾರೆ, ಇದು ನನ್ನ ನಿರೀಕ್ಷೆ ಮಾತ್ರವಲ್ಲ. ಎಲ್ಲರ ಅಭಿಪ್ರಾಯ ಕೂಡ ಹೌದು. ಈ ಋತುವಿನಲ್ಲಿ ಅವರು ಆಲ್ ರೌಂಡ್ ಪ್ರದರ್ಶನ ನೀಡಿದ್ದಾರೆ.
ಸೀಸನ್ ಆರಂಭಕ್ಕೂ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಾರಾ ಎಂಬ ಪ್ರಶ್ನೆ ಇತ್ತು. ಆದ್ರೆ ಆ ಪ್ರಶ್ನೆಯನ್ನ ಹಾರ್ದಿಕ್ ಪಾಂಡ್ಯ ಧೂಳಿಪಟ ಮಾಡಿದರು. ಯಾವುದೇ ಆಟಗಾರ ನಾಯಕತ್ವದ ಗುಣ ಹೊಂದಿದ್ದರೆ.. ಭವಿಷ್ಯದಲ್ಲಿ ಭಾರತ ತಂಡದ ನಾಯಕನಾಗುವ ಅವಕಾಶವಿದೆ. ಆದರೆ, ರೋಹಿತ್ ನಂತರ ಪಾಂಡ್ಯ ಜತೆಗೆ ತಂಡದ ನಾಯಕತ್ವದ ರೇಸ್ನಲ್ಲಿ ಇಬ್ಬರು ಅಥವಾ ಮೂವರು ಆಟಗಾರರಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.