ನವದೆಹಲಿ : ನಟಿ ಸನ್ನಿ ಲಿಯೋನ್ ಮತ್ತೊಂದು ಉದ್ಯಮಕ್ಕೆ ಕೈ ಹಾಕಿ ಸುದ್ದಿಯಾಗಿದ್ದಾರೆ.
ಈಗಾಗಲೇ ನಟನೆಯೊಂದು ಹಲವಾರು ವ್ಯವಹಾರಗಳನ್ನು ಮಾಡುತ್ತಿರುವ ಸನ್ನಿ ಈಗ ಹೋಟೆಲ್ ಉದ್ಯಮಕ್ಕೆ ಕೈ ಹಾಕಿದ್ದಾರೆ. ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬೆರ್ ಉತ್ತರ ಪ್ರದೇಶದಲ್ಲಿ ಹೋಟೆಲ್ ತೆರೆದಿದ್ದಾರೆ.
ನೋಯಿಡಾದಲ್ಲಿ ಚಿಕಲೋಕ (ChicaLoca) ಎಂಬ ಹೆಸರಿನಲ್ಲಿ ರೆಸ್ಟೋರೆಂಟ್ ತೆರೆದಿದ್ದಾರೆ. ಸಿಂಗಿಂಗ್ ಬೌಲ್ಸ್ ಹಾಸ್ಪಿಟಾಲಿಟಿ (Singing Bowls Hospitality) ಎಂಬ ಸಂಸ್ಥೆ ಚಿಕಲೋಕ ರೆಸ್ಟೋರೆಂಟ್ ಬಿಸಿನೆಸ್ನಲ್ಲಿ ಸನ್ನಿ ಲಿಯೋನೆ ಜೊತೆ ಸಹಭಾಗಿಯಾಗಿದೆ. ಕೇವಲ ಟಿವಿ ಶೋಗೆ ಮಾತ್ರ ಸೀಮಿತವಾಗಿರದೆ, ಬೇರೆ ಉದ್ಯೋಗದತ್ತ ಮುಖ ಮಾಡುವುದಕ್ಕಾಗಿ ಈ ಉದ್ಯೋಗ ಆರಂಭಿಸಿರುವುದಾಗಿ ನಟಿ ಸನ್ನಿ ಹೇಳಿದ್ದಾರೆ.