17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಎಲ್ಲ ತಂಡಗಳೂ ಸಿದ್ಧತೆ ನಡೆಸಿದ್ದು, ಸದ್ಯ ಲಕ್ನೋ ತಂಡದಲ್ಲಿ ಭಾರೀ ಬದಲಾವಣೆಯಾಗಿದೆ.
ಈ ತಂಡ ವಿದೇಶಿ ಆಟಗಾರನನ್ನು ಹೊಸ ಉಪನಾಯಕನಾಗಿ ನೇಮಿಸಿಕೊಂಡಿದೆ. ಹಿಂದಿನ ಆವೃತ್ತಿಯಲ್ಲಿ ಉಪನಾಯಕರಾಗಿದ್ದ ಕೃನಾಲ್ ಪಾಂಡ್ಯ ಸ್ಥಾನವನ್ನು ಈಗ ವೆಸ್ಟ್ ಇಂಡೀಸ್ನ ಮಾಜಿ ನಾಯಕ ನಿಕೋಲಸ್ ಪೂರನ್ ಗೆ ಬಿಟ್ಟು ಕೊಡಲಾಗಿದೆ. ಹೀಗಾಗಿ ಇನ್ನು ಮುಂದೆ ಪೂರನ್ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ನಾಯಕ ಕೆ.ಎಲ್. ರಾಹುಲ್ ಅವರು ನಿಕೋಲಸ್ ಪುರನ್ ಅವರಿಗೆ ಜೆರ್ಸಿ ನೀಡುತ್ತಿರುವ ಫೋಟೋ ವೈರಲ್ ಆಗಿದ್ದು, ಜೆರ್ಸಿಯ ಹಿಂಭಾಗದಲ್ಲಿ ಪೂರನ್ ಹೆಸರನ್ನು ಬರೆಯಲಾಗಿದ್ದು, ಬ್ರಾಕೆಟ್‌ನಲ್ಲಿ ವಿಸಿ (ಉಪನಾಯಕ) ಎಂದು ಬರೆಯಲಾಗಿದೆ. ಈ ಮೂಲಕ ಹೊಸ ಭರವಸೆಯೊಂದಿಗೆ ಲಕ್ನೋ ತಂಡ ಕಣಕ್ಕೆ ಇಳಿಯಲು ಮುಂದಾಗಿದೆ.