ನಾಯಿ ಕೊಲ್ಲಲು ರೌಡಿ ಶೀಟರ್ ಗೆ ಸುಪಾರಿ ಕೊಟ್ಟ ನೀಚ..! ಇಬ್ಬರ ಬಂಧನ
ತಮಿಳುನಾಡು: ಮನುಷ್ಯರ ಕೊಲ್ಲಲು ಸುಪಾರಿ ಕೊಟ್ಟಿರುವ ವಿಚಾರವನ್ನ ಕೇಳಿದ್ದೇವೆ. ಆದ್ರೆ ಇಲ್ಲೊಬ್ಬ ಪಾಪಿ ಮೂಕ ಪ್ರಾಣಿ ನಾಯಿಯ ಜೀವ ತೆಗೆಯುವುದಕ್ಕೆ ರೌಡಿ ಶೀಟರ್ ಗೆ 500 ರೂ. ಸುಪಾರಿ ಕೊಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಈ ಸಂಬಂಧ ತಮಿಳುನಾಡು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸೆಲ್ಲೂರ್ ನ ಶಿವಗಾಮಿ ರಸ್ತೆಯಲ್ಲಿ ಬೀದಿನಾಯಿಯನ್ನು ಅಮಾನುಷವಾಗಿ ಹೊಡೆದು ಕೊಲ್ಲಲಾಗಿತ್ತು. ಈ ನಾಯಿಯನ್ನು ಕೊಲ್ಲಲು ಸರವಣನ್ ಎಂಬಾತ ವಿಮಲ್ರಾಜ್ ಎಂಬ ಮಾಜಿ ರೌಡಿ ಶೀಟರ್ ಗೆ 500 ರೂ ಸುಪಾರಿ ಕೊಟ್ಟಿದ್ದ. ಸುಪಾರಿ ಪಡೆದ ವಿಮಲ್ ರಾಜ್ ನಾಯಿಯನ್ನು ಅಟ್ಟಾಡಿಸಿ ಹೊಡೆದು ಕೊಂದು ಹಾಕಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಅಲ್ದೇ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ತಮಿಳುನಾಡಿನ ಮಧುರೈ ಜಿಲ್ಲೆಯ ಸೆಲ್ಲೂರ್ ಪೊಲೀಸರು ಕೆ ಮುತ್ತು ಸರವಣನ್ ಮತ್ತು ಎಸ್ ವಿಮಲ್ರಾಜ್ ನನ್ನ ಬಂಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಭಯೋತ್ಪಾದಕರು ಬಳಸುತ್ತಿದ್ದ 8 ವರ್ಷ ಹಳೆಯ ಭೂಗತ ಸುರಂಗ ಪತ್ತೆ
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಮಧುರೈನ ಉತ್ತರ ಗ್ರಾಮದ ಆಡಳಿತಾಧಿಕಾರಿ ಮುತ್ತುಮೊಳಿ ಅವರು ಈ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 429 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಾಣಿ ಹಿಂಸೆ ನಿಯಂತ್ರಣ ಕಾಯ್ದೆ 1960 ರ ಸೆಕ್ಷನ್ 11 (ಐ) (1) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಮೂಲಗಳ ಪ್ರಕಾರ ಸರವಣನ್ ಆ ರಸ್ತೆಯಲ್ಲಿ ಓಡಾಡುತ್ತಿದ್ದಾಗ ನಾಯಿ ಆತನನ್ನು ಕಚ್ಚಲು ಹೋಗಿ ಅಟ್ಟಾಡಿಸಿತ್ತು. ಪ್ರತೀ ಬಾರಿ ಹೀಗೆ ಆದಾಗ ಕೋಪಗೊಂಡು ಸರವಣನ್ ಸ್ಥಳೀಯ ರೌಡಿ ಶೀಟರ್ ವಿಮಲ್ ರಾಜ್ ಗೆ 500 ರೂ ಸುಪಾರಿ ಕೊಟ್ಟಿದ್ದ. ಅದರಂತೆ ವಿಮಲ್ ರಾಜ್ ನಾಯಿಯನ್ನು ರಸ್ತೆಯಲ್ಲೇ ಅಟ್ಟಾಡಿಸಿ ದೊಣ್ಣೆಯಿಂದ ಹೊಡೆದು ಕೊಂದು ಹಾಕಿದ್ದ ಎನ್ನಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








