Supreme Court-
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಲು ಕೇಂದ್ರ ಸರ್ಕಾರ ತಂದಿದ್ದ ಸಂವಿಧಾನ 103ನೇ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾದ 40 ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಚ್ ಸೋಮವಾರ (ಇಂದು)ಮಹತ್ವದ ತೀರ್ಪನ್ನು ಪ್ರಕಟಿಸಿದೆ.
ಪಂಚಸದಸ್ಯ ಸಾಂವಿಧಾನಿಕ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್, ನ್ಯಾದಿನೇಶ್ ಮಹೇಶ್ವರಿ, ನ್ಯಾ ಎಸ್.ರವೀಂದ್ರ ಭಟ್, ನ್ಯಾ ಬೆಲಾ ಎಂ. ತ್ರಿವೇದಿ ಹಾಗೂ ನ್ಯಾಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು ತೀರ್ಪು ಪ್ರಕಟಿಸಿದೆ ಎಂದು ಸುಪ್ರೀಂಕೋರ್ಚ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಈ ವಿಧೇಯಕಗಳಿಗೆ 2019ರ ಜ.8 ಹಾಗೂ 9ರಂದು ಲೋಕಸಭೆ ಮತ್ತು ರಾಜ್ಯಸಭೆ ಒಪ್ಪಿಗೆ ನೀಡಿದ್ದವು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಮಾನ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಲು ಆರ್ಥಿಕವಾಗಿ ಹಿಂದುಳಿದವರಿಗೂ ಶೇ.10ರಷ್ಟುಮೀಸಲಾತಿ ನೀಡಲು ಕೇಂದ್ರ ಸರ್ಕಾರ ಮಸೂದೆಯನ್ನು ರೂಪಿಸಿತ್ತು. ಬಳಿಕ ರಾಷ್ಟ್ರಪತಿಗಳು ಇದಕ್ಕೆ ಸಮ್ಮತಿಸಿ ಅಂಕಿತ ಹಾಕಿದ್ದರು.
ಸಂವಿಧಾನಕ್ಕೆ 103ನೇ ತಿದ್ದುಪಡಿಯಲ್ಲಿ ಪರಿಶಿಷ್ಟಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ನೀಡಲಾಗಿರುವ ಶೇ.50ರಷ್ಟುಮೀಸಲಾತಿಯಲ್ಲಿ ಯಾವುದೇ ಬದಲಾವಣೆ ತರದೆ, ಅದನ್ನು ಬಿಟ್ಟು ಶೇ.10ರಷ್ಟುಮೀಸಲಾತಿಯನ್ನು ಪಡೆಯುತ್ತಿಲ್ಲದ ಸಮುದಾಯಗಳಿಗೆ ನೀಡುವ ಉದ್ದೇಶದಿಂದ ಮಾಡಲಾಗಿತ್ತು.
ಇದನ್ನು ಪ್ರಶ್ನಿಸಿ ಸುಮಾರು 40 ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ಸುಪ್ರೀಂಕೋರ್ಚ್ಗೆ ವರ್ಗಾಯಿಸುವಂತೆ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರದ ಮೀಸಲಾತಿ ಅನುಷ್ಠಾನ ಸಂವಿಧಾನದ ಮೂಲ ಸಂರಚನೆಯನ್ನೇ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು.
ಕೇಂದ್ರ ಸರ್ಕಾರ ಮೀಸಲಾತಿಯ ಪರಿಕಲ್ಪನೆಯನ್ನೇ ಹಿಂಬಾಗಿಲಿನಿಂದ, ವಂಚನೆಯಿಂದ ನಾಶಪಡಿಸಲು ಯತ್ನಿಸುತ್ತಿದೆ ಮೀಸಲಾತಿ ನೀಡಲು ಆರ್ಥಿಕತೆ ಮಾನದಂಡವಾಗಬಾರದು. ಎಂಬುದು ಅರ್ಜಿದಾರರ ಆರೋಪವಾಗಿತ್ತು. ಈ ಕುರಿತು ಸೆಪ್ಟೆಂಬರ್ನಲ್ಲಿ ಆರೂವರೆ ದಿನಗಳ ವಿಚಾರಣೆ ನಡೆದಿದ್ದು, ಘಟಾನುಘಟಿ ನ್ಯಾಯಾಧಿಶರು ವಾಧ ವಿವಾದ ನಡೆಸಿದರು .
ಈಗ ಮೀಸಲಾತಿಗೆ ಸುಪ್ರೀಂ ಕೋರ್ಟ ಅಸ್ತು ಎಂದಿದೆ.