Jai Bhim | ಜೈ ಭೀಮ್ ಚಿತ್ರಕ್ಕೆ ಮತ್ತೆರಡು ಅವಾರ್ಡ್
‘ಜೈ ಭೀಮ್’ ಕರೋನಾ ಸಮಯದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿ ಚರಿತ್ರೆ ಸೃಷ್ಠಿಸಿದ ಸಿನಿಮಾ.
ಸೂರ್ಯ ನಾಯಕನಾಗಿ ಟಿ.ಜೆ. ಜ್ಞಾನವ್ಲೆ ನಿರ್ದೇಶನದ ಈ ಚಿತ್ರವು ಇತ್ತೀಚೆಗೆ ದಾದಾ ಸಾಹೇಬ್ ಪಾಲ್ಕೆ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿದೆ.
ಈ ಸಮಾರಂಭದಲ್ಲಿ ಉತ್ತಮ ಚಿತ್ರ ಮತ್ತು ಸಿನಿಮಾದಲ್ಲಿ ನಟಿಸಿದ ಮಣಿಕಂದನ್ ಅವರಿಗೆ ‘ಬೆಸ್ಟ್ ಸಪೋರ್ಟಿಂಗ್ ಆಕ್ಟರ್’ಪ್ರಶಸ್ತಿ ಪಡೆದಿತ್ತಿತ್ತು.
ಇದೀಗ ‘ಜೈ ಭೀಮ್’ ಚಿತ್ರಕ್ಕೆ ಮತ್ತೆರಡು ಪ್ರಶಸ್ತಿಗಳು ಬಂದಿವೆ.
ಏಪ್ರಿಲ್ 14 ರಿಂದ 20 ರವರೆಗೆ ಬೋಸ್ಟನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜೈ ಭೀಮ್ ಅನ್ನು ಪ್ರದರ್ಶಿಸಲಾಯಿತು.
ಇದರಲ್ಲಿ ನಟಿ ಲಿಯೋಮೊಲ್ ಜೋಸ್ ಅವರಿಗೆ ‘ಇಂಡಿ ಸ್ಪಿರಿಟ್ ಅತ್ಯುತ್ತಮ ನಟಿ’ ಪ್ರಶಸ್ತಿ ನೀಡಲಾಗಿದೆ.
‘ಇಂಡಿ ಸ್ಪಿರಿಟ್ ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿಯನ್ನು ಚಲನಚಿತ್ರ ಕ್ಯಾಮರಾಮನ್ ಎಸ್.ಆರ್. ಕದಿರ್ ಪೆಡೆದುಕೊಂಡಿದ್ದಾರೆ.
‘2ಡಿ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ಸೂರ್ಯ ಮತ್ತು ಜ್ಯೋತಿಕಾ ಅವರು ‘ಜೈ ಭೀಮ್’ ಚಿತ್ರವನ್ನು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ನಿರ್ಮಿಸಿದ್ದಾರೆ.suriya-jai-bhim-movie-got-indie-spirit-awards