ಮುಖೇಶ್ ಅಂಬಾನಿ ನಿವಾಸದ ಬಳಿ ಶಂಕಿತ ಸ್ಫೋಟಕ ಪತ್ತೆ
ಮುಂಬೈ,ಫೆಬ್ರವರಿ25: ಮುಂಬೈನ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಜಿಲೆಟಿನ್ ತುಂಬಿದ ಕಾರೊಂದು ಪತ್ತೆಯಾಗಿದೆ.
ಬಿಲಿಯನೇರ್ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯ ಅದ್ದೂರಿ ಬಹುಮಹಡಿ ನಿವಾಸ ಆಂಟಿಲಿಯಾದ ಬಳಿ ಶಂಕಿತ ಸ್ಫೋಟಕಗಳಿಂದ ತುಂಬಿದ ಎಸ್ಯುವಿ ಪತ್ತೆಯಾಗಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಕಾರ್ಮೈಕಲ್ ರಸ್ತೆಯಲ್ಲಿ ಶಂಕಿತ ಸ್ಫೋಟಕಗಳಿಂದ ತುಂಬಿದ ಎಸ್ಯುವಿ ಗುರುವಾರ ಸಂಜೆ ಪತ್ತೆಯಾಗಿದೆ. ಎಸ್ಯುವಿ ಕಾರಿನಲ್ಲಿ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದೆ. ಮುಂಬೈ ಪೊಲೀಸ್ ಅಪರಾಧ ವಿಭಾಗವು ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ತಿಳಿಸಿದ್ದಾರೆ.
ಉನ್ನತ ಪೊಲೀಸ್ ಅಧಿಕಾರಿಗಳು, ಎಟಿಎಸ್, ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ತನಿಖೆಗಾಗಿ ಸ್ಥಳಕ್ಕೆ ಧಾವಿಸಿದ್ದು, ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸ್ ಶ್ವಾನ ದಳ, ಸ್ಫೋಟಕ ತಜ್ಞರು ಮತ್ತು ಇತರರು ಎಸ್ಯುವಿಯನ್ನು ಪರಿಶೀಲಿಸುತ್ತಿದ್ದಾರೆ.
ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಗೃಹ ರಾಜ್ಯ ಸಚಿವ ಶಂಭುರಾಜ್ ದೇಸಾಯಿ ಮಾಧ್ಯಮಗಳಿಗೆ ತಿಳಿಸಿದರು.
ಮುಕೇಶ್ ಅಂಬಾನಿಯವರ ನಿವಾಸದ ಬಳಿ ವಾಹನವೊಂದು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಜೆಲೆಟಿನ್ ಕಡ್ಡಿಗಳು ಇರುವುದು ಕಂಡುಬಂದಿದೆ.
ಪ್ರತಿದಿನ ಬೆಳಿಗ್ಗೆ ಬೆಳ್ಳುಳ್ಳಿ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/oWAdASicQQ
— Saaksha TV (@SaakshaTv) February 23, 2021
ಎಲ್ಐಸಿ(LIC)ಯಿಂದ ತನ್ನ ಗ್ರಾಹಕರಿಗಾಗಿ ಮಾರ್ಚ್ 6 ರವರೆಗೆ ವಿಶೇಷ ಸೌಲಭ್ಯ https://t.co/H6UI5Ixv2K
— Saaksha TV (@SaakshaTv) February 23, 2021
ಮನೆಯಲ್ಲೇ ಸುಲಭವಾಗಿ ತಯಾರಿಸಿ ಚಾಕೊಲೇಟ್ https://t.co/YOgFatzho4
— Saaksha TV (@SaakshaTv) February 23, 2021