ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಚೇಳೂರಿನ ಚಾಕವೇಲುವಿನಲ್ಲಿ ನಡೆದಿದೆ. ಆದರೆ, ಮಹಿಳೆಯ ಕುಟುಂಬಸ್ಥರು ಗಂಡನ ವಿರುದ್ಧ ಕೊಲೆ ಮಾಡಿದ್ದಾರೆ.
ಗ್ರಾಮದ ಅನಿತಾ (23) ಸಾವನ್ನಪ್ಪಿರುವ ಮಹಿಳೆ. ಅನಿತಾ, ಬಾಗೇಪಲ್ಲಿಗೆ ಗಾರ್ಮೆಂರ್ಟ್ಸ್ಗೆ ಬರುತ್ತಿದ್ದ ಆಂಧ್ರಪ್ರದೇಶದ (Andhra Pradesh) ರಾಚವಾರಪಲ್ಲಿಯ ಅನಿತಾ ಮಣಿಕಂಠ ಎಂಬಾತನ ಜೊತೆಗೆ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.
ಆರು ತಿಂಗಳ ಹಿಂದೆ ದಂಪತಿ ಚಾಕುವೇಲುವಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಣಿಕಂಠನ ತಾಯಿ ಸಾವಿತ್ರಮ್ಮ, ಅಕ್ಕ ಕುಸುಮ ಹಾಗೂ ಬಾವ ರಾಘವೇಂದ್ರ ಜಗಳ ಮಾಡಿದ್ದರು. ಹೀಗಾಗಿ ಮತ್ತೆ ತಮ್ಮ ಹಳೆಯ ವಾಸಕ್ಕೆ ಆಗಮಿಸಿದ್ದರು. ಈ ವೇಳೆ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅನಿತಾಳ ಕುಟುಂಬಸ್ಥರು ಪತಿ ಮಣಿಕಂಠನ ವಿರುದ್ಧ ಆರೋಪಿಸಿ ದೂರು ನೀಡಿದ್ದಾರೆ.