ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಅವರ ನಿವಾಸದ ಮೇಲೆ ಅನುಮಾನಾಸ್ಪದ ವಿಮಾನ ಹಾರಾಟ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ನಾಗರಿಕ ವಿಮಾನವೊಂದು ಡೆಲವೇರ್‌ನ ವಿಲ್ಮಿಂಗ್ಟನ್‌ನ ನಿರ್ಬಂಧಿತ ವಾಯು ಪ್ರದೇಶದಲ್ಲಿ ಈ ವಿಮಾನ ಹಾರಾಟ ನಡೆಸಿದೆ ಎನ್ನಲಾಗಿದೆ. ಕೂಡಲೇ ಅಮೆರಿಕದ ಯುದ್ಧ ವಿಮಾನಗಳು ತಕ್ಷಣವೇ ಮುನ್ನೆಚ್ಚರಿಕೆ ವಹಿಸಿ ಅದನ್ನು ತಡೆದಿದೆ ಎಂದು ತಿಳಿದು ಬಂದಿದೆ. .
ಅಮೆರಿಕದ ಯುದ್ಧ ವಿಮಾನಗಳು ನಾಗರಿಕ ವಿಮಾನವನ್ನು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದೆ. ವಿಮಾನವು ವಿಲ್ಮಿಂಗ್ಟನ್‌ನ ನಿರ್ಬಂಧಿತ ವಾಯುಪ್ರದೇಶ ಪ್ರವೇಶಿಸಿದಾಗ, ಯುಎಸ್ ಅಧ್ಯಕ್ಷ ಜೋ ಬಿಡನ್ ವಿಲ್ಮಿಂಗ್ಟನ್ ನಲ್ಲಿರುವ ನಿವಾಸದಲ್ಲಿ ಇದ್ದರು ಎಂದು ತಿಳಿದು ಬಂದಿದೆ.








