ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿ : ಕೊನೆ ಬಾಲ್ ನಲ್ಲಿ ಕರ್ನಾಟಕಕ್ಕೆ ಸೋಲು
ಫೈನಲ್ ನಲ್ಲಿ ಗೆಲುವು ಕೈಚೆಲ್ಲಿದ ಕರ್ನಾಟಕ
ದೆಹಲಿ : ಸೈಯ್ಯದ್ ಮುಷ್ತಾಕ್ ಅಲಿ ಟಿ 20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲುಂಡಿದೆ. ತಮಿಳುನಾಡು ತಂಡ ಸತತ ಎರಡನೇ ಬಾರಿ ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯನ್ನ ಜಯಿಸಿದೆ.
ತಮಳುನಾಡಿನ ಶಾರೂಕ್ ಖಾನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ತಮಿಳುನಾಡು ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ 4 ವಿಕೆಟ್ ಗಳಿಂದ ರೋಚಕ ಜಯ ಸಾಧಿಸಿದೆ.
ಪಂದ್ಯದ ಅಂತಿಮ ಓವರ್ ನ ಕೊನೆಯ ಎಸೆತದಲ್ಲಿ ಶಾರೂಕ್ ಸಿಕ್ಸರ್ ಬಾರಿಸುವ ಮೂಲಕ ತಮಿಳುನಾಡು ಚಾಂಪಿಯನ್ ಪಟ್ಟ ಉಳಿಸಿಕೊಂಡಿತು.
ದೆಹಲಿಯ ಅರುಣ್ ಜೇಟ್ಲಿ ಮೈದಾನಲ್ಲಿ ಟಾಸ್ ಸೋತು ಬ್ಯಾಟಿಂಗ್ ಬಂದ ಕರ್ನಾಟಕಕ್ಕೆ ತಮಿಳುನಾಡು ಬೌಲರ್ ಗಳು ಶಾಕ್ ಮೇಲೆ ಶಾಕ್ ನೀಡಿದರು.
ಆರಂಭಿಕರಾದ ರೋಹನ್ ಕದಂ ಶೂನ್ಯಕ್ಕೆ ಔಟ್ ಆದರು. ಬಳಿಕ 18 ರನ್ ಸಿಡಿಸಿ ಕರುಣ್ ನಾಯರ್ ಪೆವಿಲಿಯನ್ ಕಡೆ ಓಡಿದ್ರು.
13ಕ್ಕೆ ಮನೀಶ್ ಪಾಂಡೆ, 16ಕ್ಕೆ ಶರತ್ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕ್ರೀಸ್ ಗೆ ಬಂದ ಅಭಿನವ್ ಮನೋಹರ್ ಜವಾಬ್ದಾರಿಯುತ ಆಟವಾಡಿದ್ರು.
ಇವರಿಗೆ ಪ್ರವೀಣ್ ದುಬೆ ಉತ್ತಮ ಸಾಥ್ ನೀಡಿದ್ರು. ಮನೋಹರ್ 46 ರನ್ ಸಿಡಿಸಿ ಔಟ್ ಆದೆ ದುಬೆ 33 ರನ್ ಚಚ್ಚಿದ್ರು.
ಕೊನೆಯಲ್ಲಿ ಸುಚಿತ್ 18 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ದಾಟುವಂತೆ ಮಾಡಿದ್ರು. ಅಂತಿಮವಾಗಿ ಕರ್ನಾಟಕ ತಂಡ ನಿಗದಿತ 20 ಒವರ್ ಗಳಲ್ಲಿ 151 ರನ್ ಗಳಿಸಿತು.
ಕರ್ನಾಟಕದ 151 ರನ್ ಮೊತ್ತವನ್ನು ಚೇಸ್ ಮಾಡಿದ ತಮಿಳುನಾಡು ತಂಡದ ಇನ್ನಿಂಗ್ಸ್ ಭರ್ಜರಿ ಎನ್ನುವಂತಿರಲಿಲ್ಲ.
ಶಾರುಕ್ ಖಾನ್ ಪ್ರವೇಶದ ಬಳಿಕ ತಮಿಳುನಾಡು ಚೇಸಿಂಗ್ ವೆ ವೇಗ ಸಿಕ್ಕಿತು. ಶಾರುಕ್ ಕ್ರೀಸ್ಗೆ ಬಂದಾಗ ತಮಿಳುನಾಡು ತಂಡ 28 ಬಾಲ್ ನಲ್ಲಿ 57 ರನ್ ಗಳಿಸಬೇಕಿತ್ತು.
ಸ್ಫೋಟಕ ಇನ್ನಿಂಗ್ಸ್ ಆಡಿದ ಶಾರೂಕ್ ಕೇವಲ 15 ಬಾಲ್ ನಲ್ಲಿ ಅಜೇಯ 33 ರನ್ ಗಳಿಸಿ ಮ್ಯಾಚ್ ವಿನ್ನರ್ ಆದರು.