ಸಯ್ಯದ್ ಮುಷ್ತಾಕ್ ಆಲಿ ಟಿ-20 ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮನೀಷ್ ಪಾಂಡೆ ಮುನ್ನಡೆಸಲಿದ್ದಾರೆ.
ನವೆಂಬರ್ 4ರಿಂದ ಆರಂಭವಾಗಲಿರುವ ಟೂರ್ನಿಯನ್ನು ಕೆಎಸ್ ಸಿಎ ಆಯ್ಕೆ ಸಮಿತಿ ಪ್ರಕಟಿಸಿದೆ.
ತಂಡದಲ್ಲಿ ಮಯಾಂಕ್ ಅಗರ್ ವಾಲ್, ದೇವದತ್ತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್ ಕೂಡ ಆಡಲಿದ್ದಾರೆ.
ತಂಡದ ಹೆಡ್ ಕೋಚ್ ಯರೇಗೌಡ, ಬೌಲಿಂಗ್ ಕೋಚ್ ಎಸ್. ಅರವಿಂದ್, ಫೀಲ್ಡಿಂಗ್ ಕೋಚ್ ಆಗಿ ದೀಪಕ್ ಚೌಗಲೆ ನೇಮಕಗೊಂಡಿದ್ದಾರೆ.
ಕರ್ನಾಟಕ ತಂಡ
ಮನೀಷ್ ಪಾಂಡೆ (ನಾಯಕ), ಮಯಾಂಕ್ ಅಗರ್ ವಾಲ್, ದೇವದತ್ ಪಡಿಕ್ಕಲ್, ಕೆ.ವಿ. ಸಿದ್ಧಾರ್ಥ್, ರೋಹನ್ ಕಡಮ್, ಅನಿರುದ್ಧ್ ಜೋಷಿ, ಅಭಿನವ್ ಮನೋಹರ್, ಕರುಣ್ ನಾಯರ್, ಬಿ.ಆರ್. ಶರತ್, ನಿಹಾಲ್ ಉಲ್ಲಾಲ್, ಶ್ರೇಯಸ್ ಗೋಪಾಲ್, ಕೆ. ಗೌತಮ್, ಜೆ. ಸುಚೀತ್, ಪ್ರವೀಣ್ ದುಬೆ, ಕೆ.ಸಿ. ಕಾರಿಯಪ್ಪ, ಪ್ರಸಿದ್ಧ್ ಕೃಷ್ಣ, ಪ್ರತೀಕ್ ಜೈನ್, ವಿ.ವೈಶಾಕ್, ದರ್ಶನ್, ವಿದ್ಯಾಧರ್ ಪಾಟೀಲ್