ಟಿ20 ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ 5 ಪಂದ್ಯ ಗೆದ್ದುಕೊಟ್ಟ ಧೋನಿ ಈಗ ಮೆಂಟರ್..!
ಇಂಡಿಯಾ-ಪಾಕಿಸ್ತಾನ ನಡುವೆ ಬಾರ್ಡರ್ ನಲ್ಲಿ ಇರಲಿ, ಕ್ರಿಕೆಟ್ ಮೈದಾನದಲ್ಲಿ ಇರಲಿ ಫೈಟ್ ಮಾತ್ರ ಜೋರಾಗಿಯೇ ಇರುತ್ತದೆ. ಅದರಲ್ಲೂ ಪಾಕ್ ವಿರುದ್ಧ ವಿಶ್ವಕಪ್ ನಲ್ಲಂತೂ ಟೀಮ್ ಇಂಡಿಯಾದ್ದೇ ಆಟ. ಏಕದಿನ ವಿಶ್ವಕಪ್ ಇರಲಿ, ಟಿ20 ವಿಶ್ವಕಪ್ ಇರಲಿ ಟೀಮ್ ಇಂಡಿಯಾ ವಿಶ್ವಕಪ್ ಪಂದ್ಯಗಳಲ್ಲಿ ಪಾಕ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ. ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲೇ ಪಾಕ್ ತಂಡವನ್ನು ಎದುರಿಸುತ್ತಿದೆ. ಹೀಗಾಗಿ ಇತಿಹಾಸ ನೆನಪು ಮತ್ತೆ ಮರುಕಳಿಸುತ್ತದೆ.
ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ 4 ವಿಶ್ವಕಪ್ ಗಳಲ್ಲಿ 5 ಪಂದ್ಯಗಳು ನಡೆದಿವೆ. 2007ರ ಚೊಚ್ಚಲ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು 2 ಬಾರಿ ಮುಖಾಮುಖಿ ಆಗಿದ್ದವು. ಅದಾದ ಮೇಲೆ 2012, 2014 ಮತ್ತು 2016ರ ವಿಶ್ವಕಪ್ ಗಳಲ್ಲಿ ತಲಾ ಒಮ್ಮೊಮ್ಮೆ ಪಂದ್ಯ ಆಡಿದ್ದವು. ಆದರೆ ಎಲ್ಲಾ ಕಡೆ ಗೆದ್ದಿದ್ದು ಭಾರತವೇ. ಡರ್ಬನ್ ನ ಕಿಂಗ್ಸ್ಮೀಡ್, ಜೋಹಾನ್ಸ್ ಬರ್ಗ್ ನ ವಾಂಡರರ್ಸ್, ಕೊಲೊಂಬೊದ ಪ್ರೇಮದಾದ, ಢಾಕಾ ಶೇರ್ ಎ ಬಾಂಗ್ಲಾ, ಕೊಲ್ಕತ್ತಾದ ಈಡನ್ ಗಾರ್ಡನ್ ಹೀಗೆ ಎಲ್ಲೇ ವಿಶ್ವಕಪ್ ಪಂದ್ಯ ನಡೆಯಲಿ ಗೆಲ್ಲೋದು ಮಾತ್ರ ಟೀಮ್ ಇಂಡಿಯಾ
2007:
ಲೀಗ್ ಮ್ಯಾಚ್: ಟೈ- ಬೌಲ್ ಔಟ್ನಲ್ಲಿ ಗೆಲುವು
ಫೈನಲ್ಸ್: 5 ರನ್ಗಳ ಜಯ
ಚೊಚ್ಚಲ ವಿಶ್ವಕಪ್ನ ಲೀಗ್ ಹಂತದಲ್ಲಿ ಡರ್ಬನ್ ನ ಕಿಂಗ್ಸ್ ಮೀಡ್ ನಲ್ಲಿ ಕಡುವೈರಿಗಳು ಕದನ ನಡೆಸಿದ್ದವು, ಪಂದ್ಯ ಟೈ ಆಗಿತ್ತು. ಆದರೆ ಬೌಲ್ ಔಟ್ ನಲ್ಲಿ ಭಾರತ ಗೆದ್ದಿತ್ತು.
ಫೈನಲ್ ಪಂದ್ಯ ಜೊಹಾನ್ಸ್ ಬರ್ಗ್ ನ ವಾಂಡರರ್ಸ್ ನಲ್ಲಿ ನಡೆದಿತ್ತು. ಆದರೆ ಪಾಕ್ 5 ರನ್ಗಳಿಂದ ಟೀಮ್ ಇಂಡಿಯಾದ ಮುಂದೆ ಮಂಡಿಯೂರಿತ್ತು.
2012: ಪ್ರೇಮದಾಸ, ಕೊಲೊಂಬೊ, 8 ವಿಕೆಟ್ ಜಯ
ಐದು ವರ್ಷಗಳ ಬಳಿಕ ಮತ್ತೊಮ್ಮೆ ಟಿ20 ವಿಶ್ವಕಪ್ ನಲ್ಲಿ ಇಂಡೋ-ಪಾಕ್ ಮ್ಯಾಚ್ ನಡೆದಿತ್ತು. ಕೊಲೊಂಬೊದ ಪ್ರೇಮದಾಸ ಮೈದಾನದಲ್ಲಿ ಭಾರತ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತ್ತು
2014- ಢಾಕಾ ಶೇರ್ ಎ ಬಾಂಗ್ಲಾ, 7 ವಿಕೆಟ್ ಜಯ
2016ರಲ್ಲಿ ಬಾಂಗ್ಲಾದೇಶದ ಢಾಕಾದ ಶೇರ್ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ಬದ್ಧವೈರಿಗಳ ನಡುವೆ ಮತ್ತೊಂದು ಫೈಟ್. ಇಲ್ಲೂ ಗೆದ್ದಿದ್ದು ಭಾರತವೇ.
2016- ಈಡನ್ ಗಾರ್ಡನ್ ಕೊಲ್ಕತ್ತಾ ,6 ವಿಕೆಟ್ ಜಯ
2016ರ ಟಿ20 ವಿಶ್ವಕಪ್ ಗೆ ಭಾರತ ಆತಿಥ್ಯವಹಿಸಿತ್ತು. ಆಗಲೂ ಫಲಿತಾಂಶ ಬದಲಾಗಲಿಲ್ಲ. ಭಾರತ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತ್ತು.
ಅಚ್ಚರಿ ಅಂದ್ರೆ ಈ ಎಲ್ಲಾ ವಿಶ್ವಕಪ್ ಗಳಲ್ಲಿ ಭಾರತ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಿದ್ದರು. ಈಗ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕ. ಧೋನಿ ಮೆಂಟರ್. ಮತ್ತೊಂದು ಗೆಲುವಿನ ಕನಸಿದೆ. ಟಿ20 ವಿಶ್ವಕಪ್ ಫೈನಲ್ ಸೋತರೂ ಬೇಜಾರಿಲ್ಲ. ಆದರೆ ಪಾಕ್ ವಿರುದ್ಧ ಸೋಲೋ ಹಾಗಿಲ್ಲ ಅನ್ನುವ ಒತ್ತಡ ಟೀಮ್ ಇಂಡಿಯಾದ ಮೇಲಿದೆ ಅನ್ನುವುದು ಸುಳ್ಳಲ್ಲ.