ಟಿ20 ಕ್ರಿಕೆಟ್ | `ಕೊಹ್ಲಿ’ಯಿಂದ `ಕಿಂಗ್’ ಪಟ್ಟ ಕಿತ್ತುಕೊಂಡ `ಗಪ್ಟಿಲ್’

1 min read
Kohli saaksha tv

ಟಿ20 ಕ್ರಿಕೆಟ್ | `ಕೊಹ್ಲಿ’ಯಿಂದ `ಕಿಂಗ್’ ಪಟ್ಟ ಕಿತ್ತುಕೊಂಡ `ಗಪ್ಟಿಲ್’

ರಾಂಚಿ : ಸದ್ಯ ವಿಶ್ವ ಕ್ರಿಕೆಟ್ ನ ಕಿಂಗ್ ಯಾರು ಅಂತಾ ಕೇಳಿದ್ರೆ ಅದಕ್ಕೆ ಥಟ್ ಬರೋ ಉತ್ತರ ಟೀಂ ಇಂಡಿಯಾದ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ.

ಕಿಂಗ್ ಕೊಹ್ಲಿ ಅಂತಲೇ ಕರೆಸಿಕೊಳ್ಳುವ ವಿರಾಟ್, ಕ್ರಿಕೆಟ್ ಮೂರು ಮಾದರಿಯಲ್ಲೂ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ.

ವಿರಾಟ್ ವೇಗಕ್ಕೆ ದಿಗ್ಗಜರ ದಾಖಲೆಗಳೇ ಉಡೀಸ್ ಆಗುತ್ತಿವೆ.

ಸದ್ಯ ವಿರಾಟ್ ಬ್ಯಾಟ್ ಕೊಂಚ ಸೈಲೆಂಟ್ ಆಗಿದ್ದರೂ ಒಮ್ಮೆ ಬ್ಯಾಟ್ ಅಬ್ಬರಿಸಲು ಶುರು ಮಾಡಿದ್ರೆ ಮತ್ತಷ್ಟು ದಾಖಲೆಗಳು ಚಿಂದಿಯಾಗೋದು ಗ್ಯಾರಂಟಿ.

Kohli saaksha tv

ಈ ಮಧ್ಯೆ ಮಾರ್ಟಿನ್ ಗಪ್ಟಿಲ್ ಟಿ20 ಕ್ರಿಕೆಟ್ ನಲ್ಲಿ ವಿರಾಟ್ ಗೆ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ. ಅಲ್ಲದೇ ಸದ್ಯ ಟಿ 20 ಕ್ರಿಕೆಟ್ ನ ಕಿಂಗ್ ಆಗಿದ್ದಾರೆ.

ಹೌದು..! ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ದಾಖಲೆ ಭಾರತ ತಂಡದ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರಲ್ಲಿತ್ತು.

ಇದೀಗ ಈ ದಾಖಲೆಯನ್ನು ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಮುರಿದು ಟಿ20 ಕ್ರಿಕೆಟ್ ನ ಕಿಂಗ್ ಆಗಿದ್ದಾರೆ.

ಕೊಹ್ಲಿ 95 ಪಂದ್ಯಗಳಿಂದ 29 ಅರ್ಧಶತಕ ಸಹಿತ 3,227 ರನ್ ಸಿಡಿಸಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದರು.

ಆದ್ರೀಗ ಮಾರ್ಟಿನ್ ಗುಪ್ಟಿಲ್ ಕೊಹ್ಲಿಯ ಈ ದಾಖಲೆಯನ್ನು ಮುರಿದಿದ್ದಾರೆ. ಗುಪ್ಟಿಲ್ 111 ಪಂದ್ಯಗಳಿಂದ 2 ಶತಕ, 19 ಅರ್ಧಶತಕ ಸಹಿತ 3,248 ರನ್ ಬಾರಿಸಿದ್ದಾರೆ.

ಆ ಮೂಲಕ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ವಿಶ್ವದ ನಂ.1 ಆಟಗಾರರಾಗಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd