ಆ ತಂಡಕ್ಕೆ ವಿಶ್ವಕಪ್ ಗೆಲ್ಲೋ ತಾಕತ್ತಿದೆ : ವಾರ್ನ್ ಭವಿಷ್ಯ
ಐಸಿಸಿ ಟಿ20 ವಿಶ್ವಕಪ್-2021 ಅಂತಿಮ ಹಂತಕ್ಕೆ ಬಂದಿದೆ. ನವೆಂಬರ್ 14 ರಂದು ವಿಶ್ವಕಪ್ ವಿಜೇತರ್ಯಾರು ಎಂದು ತಿಳಿದುಬರುತ್ತದೆ.
ಈಗಾಗಲೇ ಸೆಮಿಸ್ಗೆ ಲಗ್ಗೆ ಇಟ್ಟಿರುವ ಇಂಗ್ಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿ ಗೆಲ್ಲಲು ರೋಚಕ ಹೋರಾಟಕ್ಕೆ ಸಜ್ಜಾಗಿವೆ.
ಈ ಅನುಕ್ರಮದಲ್ಲಿ ಆಸ್ಟ್ರೇಲಿಯಾದ ದಂತಕಥೆ ಸ್ಪಿನ್ನರ್ ಶೇನ್ ವಾರ್ನ್ ವಿಶ್ವಕಪ್ ವಿಜೇತರ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ.
ಆರನ್ ಫಿಂಚ್ ನೇತೃತ್ವದ ಆಸೀಸ್ ತಂಡಕ್ಕೆ ಟ್ರೋಫಿ ಗೆಲ್ಲುವ ಸಾಮಥ್ರ್ಯವಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಟೂರ್ನಿಯಲ್ಲಿ ಇದುವರೆಗೆ ಸ್ಥಿರ ಪ್ರದರ್ಶನ ತೋರಿದ ಅತ್ಯುತ್ತಮ ತಂಡ ಪ್ರಶಸ್ತಿಗೆ ಅರ್ಹವಾಗಿದೆ.
ಆಸ್ಟ್ರೇಲಿಯದ ಬ್ಯಾಟಿಂಗ್ ಕ್ರಮಾಂಕ ಉತ್ತಮವಾಗಿದ್ದು, ಎಲ್ಲರೂ ಉತ್ತಮ ಫಾರ್ಮ್ ನಲ್ಲಿದ್ದಾರೆ.
ಮಾಜಿ ನಾಯಕ ಸ್ಟೀವ್ ಸ್ಮಿತ್ ಸ್ಥಿರವಾಗಿ ಆಡುತ್ತಿದ್ದಾರೆ. ಮಾರ್ಶ್, ಸ್ಟೋಯ್ನಿಸ್, ಮ್ಯಾಕ್ ವೆಲ್ ಅಬ್ಬರಿಸಿದ್ರೆ ಆಸೀಸ್ ವಿಶ್ವಕಪ್ ಗೆಲ್ಲೋದು ಗ್ಯಾರಂಟಿ ಎಂದಿದ್ದಾರೆ ವಾರ್ನ್.
ಮಿಚಲ್ ಮಾರ್ಶ್ ವಿಶ್ವಾಸ
ಗ್ರೂಪ್-1ರಲ್ಲಿ ಸ್ಥಾನ ಪಡೆದಿರುವ ಆಸ್ಟ್ರೇಲಿಯ ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಇಂಗ್ಲೆಂಡ್ ಜೊತೆಗೆ ಸೆಮಿಸ್ಗೆ ಲಗ್ಗೆ ಇಟ್ಟಿದೆ.
ಸೆಮಿಫೈನಲ್ನಲ್ಲಿ ಆಸೀಸ್ ಗ್ರೂಪ್-2ರ ಪಾಕಿಸ್ತಾನವನ್ನು ಎದುರಿಸಲಿದೆ. ನವೆಂಬರ್ 11 ರಂದು ದುಬೈನಲ್ಲಿ ಪಂದ್ಯ ನಡೆಯಲಿದೆ.
ಈ ಮಧ್ಯೆ ಈ ಮೈದಾನದಲ್ಲಿ ಟಾಸ್ ಹೆಚ್ಚು ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಮಿಚಲ್ ಮಾರ್ಶ್ ಹೇಳಿದ್ದಾರೆ.
ಆದಾಗ್ಯೂ, ಇಲ್ಲಿ ಟಾಸ್ ಗೆದ್ದ ಬಹುತೇಕ ಎಲ್ಲಾ ತಂಡಗಳು ಮೊದಲು ಬೌಲಿಂಗ್ ಮಾಡಿವೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ಅಷ್ಟಾಗಿ ಹಿಮ ಬಿದ್ದಿರಲಿಲ್ಲ.
ವಾಸ್ತವವಾಗಿ ಮೊದಲು ಬ್ಯಾಟ್ ಮಾಡಿದ ತಂಡ ಖಂಡಿತಾ ಬೃಹತ್ ಸ್ಕೋರ್ ದಾಖಲಿಸಲೇಬೇಕು. ಎದುರಾಳಿ ತಂಡವನ್ನು ಕಟ್ಟಿಹಾಕಬೇಕು.
ನಾವೀಗ ಸೆಮಿಫೈನಲ್ನಲ್ಲಿದ್ದೇವೆ. ನಾವು ಸಂಪೂರ್ಣ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದೇವೆ. ಏನಾಗುತ್ತದೆ ಎಂದು ಊಹಿಸುವುದು ಕಷ್ಟ ಎಂದಿದ್ದಾರೆ ಮಿಚಲ್.