ಆಸ್ಟ್ರೇಲಿಯಾ ಆರ್ಭಟ, ಬಾಂಗ್ಲಾ ಪರದಾಟ, ಭರ್ಜರಿಯಾಗಿ ಗೆದ್ದು ರನ್ರೇಟ್ ಹೆಚ್ಚಿಸಿಕೊಂಡ ಕಾಂಗರೂ ಟೀಮ್
ದುಬೈನಲ್ಲಿ ಆಸ್ಟ್ರೇಲಿಯಾ ತನ್ನ ಆಟವನ್ನು ಫರ್ಫೆಕ್ಟ್ ಆಗಿ ಆಡಿತು. ಬೌಲರ್ಗಳು ಬಾಂಗ್ಲಾ ಬ್ಯಾಟ್ಸ್ಮನ್ಗಳನ್ನು ಬೇಗನೆ ಕಟ್ಟಿಹಾಕಿದರೆ, ಬ್ಯಾಟ್ಸ್ಮನ್ಗಳು 82 ಎಸೆತ ಬಾಕಿ ಇರುವಾಗಲೇ ಚೇಸಿಂಗ್ ಮುಗಿಸಿಕೊಟ್ರು.
ಆಸ್ಟ್ರೇಲಿಯಾ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.
ಟಾಸ್ ಗೆದ್ದ ಆಸ್ಟ್ರೇಲಿಯಾ ಬಾಂಗ್ಲಾದೇಶವನ್ನು ಬ್ಯಾಟಿಂಗ್ಗೆ ಇಳಿಸಿತು.
ಮಿಚೆಲ್ ಸ್ಟಾರ್ಕ್ ಮತ್ತು ಹೇಜಲ್ವುಡ್ ಆರಂಭದಲ್ಲಿ 3 ವಿಕೆಟ್ ತಂದುಕೊಟ್ರು. ಗ್ಲೆನ್ ಮ್ಯಾಕ್ಸ್ವೆಲ್ ಕೂಡ ವಿಕೆಟ್ ಕಬಳಿಸಿದರು.
ಆ್ಯಡಂ ಜಂಪಾ ಕೇವಲ 19 ರನ್ ನೀಡಿ 5 ವಿಕೆಟ್ ಪಡೆದರು.
ಬಾಂಗ್ಲಾದೇಶದ ಪರವಾಗಿ ಮೊಹಮ್ಮದ್ ನಯೀಮ್ (17 ರನ್), ಮೊಹಮ್ಮದುಲ್ಲಾ (16 ರನ್) ಮತ್ತು ಶಮೀಮ್ ಹೊಸೈನ್ (19ರನ್) ಮಾತ್ರ ಎರಡಂಕಿ ದಾಟಿದರು.
ಬಾಂಗ್ಲಾದೇಶ 15 ಓವರುಗಳಲ್ಲಿ 73 ರನ್ಗಳಿಗೆ ಆಲೌಟ್ ಆಯಿತು.
ಚೇಸಿಂಗ್ ಹೊರಟ ಆಸ್ಟ್ರೇಲಿಯಾಕ್ಕೆ ಡೇವಿಡ್ ವಾರ್ನರ್ ಮತ್ತು ಆ್ಯರೋನ್ ಫಿಂಚ್ ಅಬ್ಬರದ ಆರಂಭ ತಂದುಕೊಟ್ಟರು.
ಫಿಂಚ್ 20 ಎಸೆತಗಳಲ್ಲಿ 40 ರನ್ಗಳಿಸಿ ಔಟಾದರೆ, ವಾರ್ನರ್ 14 ಎಸೆತಗಳಲ್ಲಿ 18 ರನ್ಗಳಿಸಿ ಔಟಾದರು.
ಮಿಚೆಲ್ ಮಾರ್ಷ್ 5 ಎಸೆತಗಳಲ್ಲಿ ಅಜೇಯ 16 ರನ್ಗಳಿಸಿದರು.
ಆಸ್ಟ್ರೇಲಿಯಾ 6.2 ಓವರುಗಳಲ್ಲಿ ಗುರಿ ಮುಟ್ಟಿ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.
ಈ ಭರ್ಜರಿ ಗೆಲುವು ಆಸ್ಟ್ರೇಲಿಯಾದ ರನ್ ರೇಟ್ ಹೆಚ್ಚಿಸುವುದರ ಜೊತೆಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರುವಂತೆ ಮಾಡಿತು.