ಮಿಲ್ಕಿ ಬ್ಯೂಟಿ ನಟಿ ಎಂದೇ ಖ್ಯಾತಿಯಾಗಿರುವ ತಮನ್ನಾ ತನ್ನ ಬಾಯ್ ಫ್ರೆಂಡ್ ನೊಂದಿಗೆ ಲಂಡನ್ ಗೆ ಹಾರಿದ್ದಾರೆ.
ಅವರು ಲಂಡನ್ ನಲ್ಲಿ ಸುತ್ತಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ತಮನ್ನಾ (Tamannaah) ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಇಬ್ಬರ ಸ್ನೇಹ ಬಾಲಿವುಡ್ ಅಂಗಳದಲ್ಲಿ ಗುಟ್ಟಾಗಿ ಉಳಿದಿಲ್ಲ. ಇತ್ತೀಚೆಗೆ ಇವರಿಬ್ಬರ ಪ್ರವಾಸಗಳು ಹೆಚ್ಚಾಗುತ್ತಿವೆ. ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. 2024 ಫೆಬ್ರವರಿಯಲ್ಲಿ ಅವರು ಮದುವೆ (Marriage) ಆಗಲಿದ್ದಾರೆ ಎನ್ನಲಾಗುತ್ತಿದೆ.
ತಮನ್ನಾ ಅವರು ವಿಜಯ್ ವರ್ಮಾ ಜೊತೆ ಪ್ರೀತಿ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದ್ದರು. ಆಗಿನಿಂದ ಇಬ್ಬರ ಮಧ್ಯೆ ಸ್ನೇಹ ಬೆಳಿದು, ಅದು ಪ್ರೀತಿಯಾಗಿ ಬೆಳೆದು ನಿಂತಿದೆ.
ಪ್ರೇಮಿಗಳ ದಿನದಂದು ಕೂಡ ನಟಿಗೆ ವಿಜಯ್ ವರ್ಮಾ ವಿಶೇಷವಾಗಿ ಶುಭಾಶಯ ಕೋರಿದ್ದರು. ಪ್ರೇಮಿಯ ಜೊತೆಗಿನ ಫೋಟೋವನ್ನು ವಿಜಯ್ ವರ್ಮಾ ಹಂಚಿಕೊಂಡಿದ್ದರು. ಕಾಲಿನ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದರು. ಅದು ತಮನ್ನಾ ಕಾಲು ಎಂದು ಹೇಳಲಾಗಿತ್ತು. ತಮನ್ನಾ ಧರಿಸಿದ್ದ ಶೋ ಮತ್ತು ಜರ್ಕಿನ್ ಫೋಟೋಗಳನ್ನು ಶೇರ್ ಮಾಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎನ್ನಲಾಗಿತ್ತು. ಈಗ ಈ ಜೋಡಿ ಲಂಡನ್ ನಲ್ಲಿ ಸುತ್ತಾಡುತ್ತಿದೆ.