ತಮಿಳುನಾಡು ವಿಧಾನಸಭಾ ಚುನಾವಣೆ : ಟಿಕೆಟ್ ಗಾಗಿ ಸಂದರ್ಶನ ಎದುರಿಸಿದ ಸ್ಟಾಲಿನ್ ಪುತ್ರ..!
ತಮಿಳುನಾಡಿನಲ್ಲಿ ವಿಧಾನಸಬಾ ಚುನಾವಣೆಗೆ ದಿನಾಂಕ ನಿಗದಿಯಾದ ನಂತರ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಆಡಳಿತ ರೂಢ ಹಾಗೂ ಪ್ರತಿಪಕ್ಷಗಳು ಭರ್ಜರಿ ಮತಬೇಟೆ ನಡೆಸುತ್ತಿವೆ. ಚುನಾವಣಾ ರಣತಂತ್ರಗಳನ್ನ ರೂಪಿಸಿಕೊಳ್ತಿವೆ. ಇತ್ತ ಎಲ್ಲಾ ಪಕ್ಷಗಳು ಟಿಕೆಟ್ ಹಂಚಿಕಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಪ್ರಮುಖವಾಗಿ ತಮಿಳುನಾಡಿನ ಬಲಿಷ್ಠ ರಾಜಕೀಯ ಪಕ್ಷವಾದ ಡಿಎಂಕೆಯ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರ ಪುತ್ರ, ಡಿಎಂಕೆ ಯೂತ್ ವಿಂಗ್ ಕಾರ್ಯದರ್ಶಿ ಹಾಗೂ ಕಾಲಿವುಡ್ ನಟ ಉದಯನಿಧಿ ಸ್ಟಾಲಿನ್ ಪಕ್ಷದ ಟಿಕೆಟ್ ಪಡೆಯಲು ಸಂದರ್ಶನವನ್ನ ಎದುರಿಸಿದ್ದಾರೆ.
ರಾಜ್ಯ ಬಜೆಟ್ 2021 : ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ
ಹೌದು ಡಿಎಂಕೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಪಡೆದುಕೊಳ್ಳಲು ಡಿಎಂಕೆ ಚುನಾವಣಾ ಸಮಿತಿಯ ಎದುರು ಹಾಜರಾಗಿ ಸಂದರ್ಶನ ಎದುರಿಸುವುದು ಕಡ್ಡಾಯವಾಗಿದೆ. ಅದರಂತೆಯೇ ಪಕ್ಷದ ಅಧ್ಯಕ್ಷ ಸ್ಟಾಲಿನ್ ಪುತ್ರ ಉದಯನಿಧಿ ಸಹ ಸಂದರ್ಶನ ಎದುರಿಸಿದ್ದಾರೆ. ಚೆನ್ನೈನಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂದರ್ಶನ ನಡೆದಿದೆ. ಅಂದ್ಹಾಗೆ ಉದಯನಿಧಿ ಸ್ಟಾಲಿನ್ ಚೈನ್ನೈ – ಚೆಪಕ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಸಂದರ್ಶನ ಎದುರಿಸಿರುವ ಉದಯನಿಧಿಯವರಿಗೆ ಟಿಕೆಟ್ ನೀಡುವುದು ಸಸದ್ಯಕ್ಕೆ ಖಚಿತವಾಗಬೇಕಾಗಿದೆ. ಆದ್ರೆ ಮೂಲಗಳ ಪ್ರಕಾರ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಫೈನಲ್ ಆಗಿದೆ.