ಚಂದನವನದ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ (Tharun – Sonal) ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಿದ್ದಾರೆ.
ಇವರಿಬ್ಬರ ಪ್ರೀತಿಗೆ ನೀರು ಹಾಕಿ, ಬೆಳೆಸಿ, ಪೋಷಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆರತಕ್ಷತೆ ಸಂಭ್ರಮದಲ್ಲಿ ನೆನಪಿಸಿಕೊಂಡು ತರುಣ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಅವರನ್ನು ನೆನೆಯುತ್ತಲೇ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಆರತಕ್ಷತೆಗೆ ಬಂದ ನವ ಜೋಡಿ ಮ್ಯೂಸಿಕ್ ಬ್ಯಾಂಡ್ ಕಾಟೇರ ಸಿನಿಮಾದ ʼಯಾವ ಜನುಮದ ಗೆಳತಿʼ ಹಾಡನ್ನು ನುಡಿಸುವ ಮೂಲಕ ಬಂದಿದ್ದಾರೆ. ಬ್ಲ್ಯಾಕ್ ಕಲರ್ ಗೋಲ್ಡ್ ಎಂಬ್ರಾಯ್ಡರಿ ಕಾಂಬಿನೇಷನ್ ಶೆರ್ವಾನಿಯಲ್ಲಿ ತರುಣ್ ಸುಧೀರ್ ಮಿಂಚುತ್ತಿದ್ದರೆ, ಗೋಲ್ಡ್ ಕಲರ್ ಲೆಹಂಗದಲ್ಲಿ ವಧು ಸೋನಲ್ ಭರ್ಜರಿಯಾಗಿ ಕಾಣಿಸಿದ್ದಾರೆ.
ದರ್ಶನ್ (Darshan) ಅವರಿಂದಲೇ ನಮ್ಮ ಪ್ರೀತಿ ಶುರುವಾಯಿತು ಎಂದು ಸೋನಲ್ ಹಾಗೂ ತರುಣ್ ಹೇಳಿದ್ದರು. ಇವರಿಬ್ಬರ ಪ್ರೀತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಸಭಾಂಗಣದಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯುತ್ತಿದೆ. ಅವಾರ್ಡ್ ಫಂಕ್ಷನ್ (Award ceremony) ಥೀಮ್ನಲ್ಲಿ ಸಿದ್ಧವಾದ ವೇದಿಕೆಯಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯಲಿದೆ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಸ್ನೇಹಿತರು ಸೇರಿದಂತೆ ಸಂಬಂಧಿಕರಿಗೆ ಆಹ್ವಾನ ನೀಡಲಾಗಿದೆ.