ವೀವೋಗೆ ಗೇಟ್ ಪಾಸ್.. ಐಪಿಎಲ್ ಗೆ ಟಾಟಾ ಟೈಟಲ್ ಸ್ಪಾನ್ಸರ್
ಇಂಡಿಯನ್ ಪ್ರಿಮಿಯರ್ ಲೀಗ್ ನ ಟೈಟಲ್ ಸ್ಪಾನ್ಸರ್ ಆಗಿ ಭಾರತೀಯ ಹೆಮ್ಮೆಯ ಟಾಟಾ ಗ್ರೂಪ್ ಆಯ್ಕೆಗೊಂಡಿದೆ.
ಮಿಲಿಯನ್ ಡಾಲರ್ ಟೂರ್ನಿಗೆ ಇಷ್ಟು ದಿನ ಚೀನಾದ ವೀವೋ ಟೈಟಲ್ ಸ್ಪಾನ್ಸರ್ ಆಗಿತ್ತು.ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು.
ಇದೀಗ ವೀವೋಗೆ ಗೇಟ್ ಪಾಸ್ ನೀಡಲಾಗಿದ್ದು, ಐಪಿಎಲ್ ಗೆ ಟೈಟಲ್ ಸ್ಪಾನ್ಸರ್ ಆಗಿ ಟಾಟಾ ಗ್ರೂಪ್ ಆಯ್ಕೆಗೊಂಡಿದೆ.
ಈ ಬಗ್ಗೆ ಐಪಿಎಲ್ ನ ಚೇರ್ ಮನ್ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಐಪಿಎಲ್ ಟೈಟಲ್ ಅನ್ನು ವೀವೋ ಬದಲಾಗಿ ಟಾಟಾ ಗ್ರೂಪ್ ಸ್ಪಾನ್ಸರ್ ಮಾಡಲಿದೆ ಎಂದು ತಿಳಿಸಿದ್ದಾರೆ.
ಇನ್ನು ಕೊರೊನಾ ನಡುವೆಯೂ 15 ನೇ ಆವೃತ್ತಿಯ ಐಪಿಎಲ್ ಗಾಗಿ ತಯಾರಿ ಆರಂಭವಾಗಿದೆ. ಈ ಬಾರಿಯ ಐಪಿಎಲ್ ನಲ್ಲಿ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಹೊಸದಾಗಿ ಸೇರ್ಪಡೆಗೊಂಡಿವೆ.