ಟೀಮ್ ಇಂಡಿಯಾಗೆ ಮುಂದಿದೆ ಮಾರಿ ಹಬ್ಬ
ಇಂಡಿಯನ್ ಪ್ರಿಮಿಯರ್ ಲೀಗ್ ಬಳಿಕ ಸಣ್ಣ ಬ್ರೇಕ್ ನಲ್ಲಿರುವ ಟೀಂ ಇಂಡಿಯಾದ ಇನ್ಮುಂದೆ ಪುರುಸೋತ್ತಿಲ್ಲದಷ್ಟು ಬ್ಯೂಸಿಯಾಗಲಿದೆ.
ಒಂದು ಸರಣಿ ಮುಗಿಯೋಷ್ಟರಲ್ಲಿ ಮತ್ತೊಂದು ಸರಣಿಗೆ ಟೀಂ ಇಂಡಿಯಾ ಆಟಗಾರರು ತಯಾರಿಯಾಗಬೇಕಾಗಿದೆ.
ಟೀಮ್ಇಂಡಿಯಾ ಕ್ರಿಕೆಟಿಗರು ಪುರುಸೊತ್ತಿಲ್ಲದಷ್ಟು ಕ್ರಿಕೆಟ್ ಆಡಬೇಕಿದೆ. ಒಂದು ಲೆಕ್ಕದಲ್ಲಿ ಮುಂದಿದೆ ಮಾರಿಹಬ್ಬ ಅನ್ನುವ ಹಾಗಿದೆ ಬ್ಯಾಕ್ ಟು ಬ್ಯಾಕ್ ಸರಣಿಗಳು.
ಅಂದಹಾಗೆ ಟೀಂ ಇಂಡಿಯಾ ಬ್ಯೂಸಿ ಶೆಡ್ಯೂಲ್ ಆರಂಭವಾಗೋದು.. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಟಿ 20 ಪಂದ್ಯಗಳ ಸರಣಿಯಿಂದ..
ಹೌದು..! ಇಂಡಿಯನ್ ಪ್ರಿಮಿಯರ್ ಲೀಗ್ ಬಳಿಕ ಟೀಮ್ ಇಂಡಿಯಾದ ಅಂತರಾಷ್ಟ್ರೀಯ ಅಭಿಯಾನ ಆರಂಭವಾಗುವುದು ಜೂನ್ 9 ರಿಂದ.
ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 5 ಟಿ20 ಪಂದ್ಯಗಳನ್ನಾಡಲಿದೆ. ಇದು ಜಸ್ಟ್ ಆರಂಭವಷ್ಟೇ. ಆದರೆ ಇದು ಮುಗಿಸಿಕೊಂಡು ಉಸಿರಾಡುವ ಹೊತ್ತಲ್ಲಿ ಇಂಗ್ಲೆಂಡ್ನಲ್ಲಿರ ಬೇಕಿದೆ.

ಈ ನಡುವೆ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 3 ಟಿ20 ಪಂದ್ಯಗಳನ್ನು ಆಡಲು ಶೆಡ್ಯೂಲ್ ಫಿಕ್ಸ್ ಆಗಿದೆ. ಇದು ಕೇವಲ 3 ಪಂದ್ಯಗಳ ಚುಟುಕು ಸರಣಿಯಾದರೂ ಟೀಮ್ ಇಂಡಿಯಾದ ಆಟಗಾರರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲೇಬೇಕಾಗುತ್ತದೆ.
ಮೂಲಗಳ ಪ್ರಕಾರ ಇಲ್ಲಿಗೆ ಭಾರತ ಕ್ರಿಕೆಟ್ ಬಿ ತಂಡವನ್ನು ಕಳುಹಿಸುವ ಸಾಧ್ಯತೆಗಳಿವೆ. ಅಂದ್ರೆ ಕಳೆದ ಶ್ರೀಲಂಕಾ ಪ್ರವಾಸದಂತೆ ಏಕಕಾಲದಲ್ಲಿ ಟೀಂ ಇಂಡಿಯಾ ಎರಡು ಕಡೆ ಆಡಬಹುದು.
ಇಂಗ್ಲೆಂಡ್ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯ:
ಇಂಗ್ಲೆಂಡ್ ವಿರುದ್ಧ ಒಂದು ಟೆಸ್ಟ್ ಪಂದ್ಯವನ್ನು ಭಾರತ ಹಿಂದಿನ ಪ್ರವಾಸದಲ್ಲಿ ಉಳಿಸಿಕೊಂಡಿತ್ತು. ಅದನ್ನು ಈ ಬಾರಿಯ ಪ್ರವಾಸದಲ್ಲಿ ಆಡಲಿದೆ. ಅದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಇಷ್ಟು ಸಾಕಾಗಲ್ಲ ಅನ್ನುವುದಕ್ಕೆ 3 ಟಿ20 ಪಂದ್ಯಗಳನ್ನೂ ಆಡಬೇಕಿದೆ.
ವಿಂಡೀಸ್ ವಿರುದ್ಧ ತವರಿನಲ್ಲಿ ಆಟ:
ವೆಸ್ಟ್ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ತವರಿನಲ್ಲಿ ಆಟ ಆಡಬೇಕಿದೆ. 3 ಏಕದಿನ ಪಂದ್ಯಗಳು ಮತ್ತು 5 ಟಿ20 ಪಂದ್ಯಗಳು ಈ ಸರಣಿಯಲ್ಲಿವೆ. ಇದು ವಿಶ್ವಕಪ್ಗೂ ಮುನ್ ನಡೆಯುವ ಸರಣಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್
ಆಸ್ಟ್ರೇಲಿಯಾದಲ್ಲಿ ಈ ಬಾರಿಯ ಟಿ20 ವಿಶ್ವಕಪ್ ನಡೆಯಲಿದೆ. ಅಕ್ಟೋಬರ್ನಲ್ಲಿ ನಡೆಯುವ ಈ ಟೂರ್ನಿಯಲ್ಲಿ ಟೀಮ್ಇಂಡಿಯಾ ಫೈನಲ್ ತಲುಪಿದರೆ ಕನಿಷ್ಠ 8 ಪಂದ್ಯಗಳನ್ನು ಆಡಬೇಕಾಗುತ್ತದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ವಿರಾಮ ಸಿಕ್ಕಿದರೆ ಅದೇ ದೊಡ್ಡದು ಅನ್ನುವ ಹಾಗಾಗಿದೆ.








