ಹೊಸ ದಾಖಲೆ ಮಾಡಿದ ಕೊಹ್ಲಿ – 150 ಮಿಲಿಯನ್ ಫಾಲೋವರ್ಸ್ ಪಡೆದ ಏಷ್ಯಾದ ಮೊದಲ ಸೆಲೆಬ್ರಿಟಿ, ವಿಶ್ವದ ಮೊದಲ ಕ್ರಿಕೆಟಿಗ..!
ಟೀಮ್ ಇಂಡಿಯಾ ನಾಯಕ , ರನ್ ಮಷಿನ್ , ವಿರಾಟ್ ಕೊಹ್ಲಿಗೆ ರೆಕಾರ್ಡ್ ಗಳ ಬ್ರೇಕ್ ಮಾಡೋದು, ಹೊಸ ಹೊಸ ದಾಖಲೆಗಳನ್ನ ತನ್ನ ಹೆಸರಿಗೆ ಮಾಡಿಕೊಳ್ಳೋದೇನು ದೊಡ್ಡ ವಿಚಾರವೇ ಅಲ್ಲ.. ವಿಶ್ವದ ಶ್ರೀಮಂತ ಕ್ರಿಕೆಟಿಗರ ಪೈಕಿ ಅಗ್ರ ಸ್ಥಾನದಲ್ಲಿರುವ ಕೊಹ್ಲಿಗೆ ಸೋಷಿಯಲ್ ಮೀಡಿಯಾದಲ್ಲಿಯೂ ಫಾಲೋವರ್ಸ್ ಗೇನೂ ಕೊರತೆಯಿಲ್ಲ.. ಅಂದ್ಹಾಗೆ ಕೊಹ್ಲಿ ಅವರನ್ನ ಜನಪ್ರಿಯ ಸಾಮಾಜಿಕ ಜಾಲತಾಣ ಫ್ಲಾಟ್ ಫಾರ್ಮ್ ಇನ್ಸ್ಟಾಗ್ರಾಮ್ ನಲ್ಲಿ 150 ಮಿಲಿಯನ್ ಮಂದಿ ಫಾಲೋ ಮಾಡ್ತಿದ್ದಾರೆ. ಈ ಮೂಲಕ ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಗಳಿಸಿದ ಸೆಲೆಬ್ರಿಟಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಹೌದು ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ , ಮೊದಲ ಭಾರತೀಯ , ಹಾಗೂ ಏಷ್ಯಾದಲ್ಲೇ ಮೊದಲಿಗ ಅಷ್ಟೇ ಅಲ್ದೇ ಕ್ರೀಡಾ ವಿಭಾಗದಲ್ಲಿ 4ನೇ ಅವರು ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ ಕೊಹ್ಲಿ. ಅಂದ್ಹಾಗೆ ಕೊಹ್ಲಿ ಪ್ರತಿ ಪ್ರಾಯೋಜಿತ ಇನ್ಸ್ಟಾಗ್ರಾಮ್ ಪೋಸ್ಟ್ ಗೆ 5 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ಕೆಲ ವರದಿಗಳು ತಿಳಿಸಿವೆ. ಇನ್ನೂ ಈ ರೀತಿಯಾದ ಸಾಧನೆ ಮಾಡಿದ ವಿಶ್ವದ 4ನೇ ಕ್ರೀಡಾಪಟುವಾಗಿದ್ದಾರೆ ಕೊಹ್ಲಿ.
ಮೊದಲನೆ ಸ್ಥಾನದಲ್ಲಿ ಜನಪ್ರಿಯ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಇದ್ದಾರೆ – ಅವರಿಗೆ 337 ಮಿಲಿಯನ್ ಫಾಲೋವರ್ಸ್ ಇದ್ದಾರೆ. 2ನೇ ಸ್ಥಾನದಲ್ಲಿರುವುದು ಲಿಯೋನಾಲ್ ಮೆಸ್ಸಿ – ಅವರನ್ನ 260 ಮಿಲಿಯನ್ ಫಾಲೋವರ್ಸ್ ಫಾಲೋ ಮಾಡ್ತಾ ಇದ್ದಾರೆ. 3ನೇ ಸ್ಥಾನದಲ್ಲಿ ನೇಮರ್ ಇದ್ದು – ಅವರನ್ನ 160 ಮಿಲಿಯನ್ ಜನ ಫಾಲೋ ಮಾಡ್ತಿದ್ದಾರೆ.. ಆದ್ರೆ ಶೀಘ್ರವೇ ಕೊಹ್ಲಿ ನೇಮರ್ ಅವರನ್ನ ಹಿಂದಿಡುವ ಸಾಧ್ಯತೆಯೂ ಇದೆ.