ನಮ್ಮ ಟೈಮ್ ನ ಬೆಸ್ಟ್ ಪ್ಲೇಯರ್ ಎಬಿಡಿ – ವಿರಾಟ್ ಕೊಹ್ಲಿ ಬಣ್ಣನೆ..!

1 min read

ನಮ್ಮ ಟೈಮ್ ನ ಬೆಸ್ಟ್ ಪ್ಲೇಯರ್ ಎಬಿಡಿ – ವಿರಾಟ್ ಕೊಹ್ಲಿ ಬಣ್ಣನೆ..!

ಎಬಿಡಿ ವಿಲಿಯರ್ಸ್.. ವಿಶ್ವ ಕ್ರಿಕೆಟ್ ನ 360 ಡಿಗ್ರಿ ಖ್ಯಾತಿಯ ಬ್ಯಾಟ್ಸ್ ಮೆನ್. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ರೂ ಭಾರತದಲ್ಲಿ ಎಬಿಡಿ ವಿಲಿಯರ್ಸ್ ಲಕ್ಷಾಂತರ ಸಂಖ್ಯೆಯ ಅಭಿಮಾನಿ ಬಳಗವಿದೆ.
ಅದರಲ್ಲೂ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಅಪತ್ಭಾಂದವ. ಆರ್ ಸಿಬಿ ತಂಡದ ಸೂಪರ್ ಸ್ಟಾರ್ ಬ್ಯಾಟ್ಸ್ ಮೆನ್ ಆಗಿರುವ ಎಬಿಡಿ ಈಗ ಎಲ್ಲಾ ಮಾದರಿಯ ಕ್ರಿಕೆಟ್ ಗೂ ವಿದಾಯ ಹೇಳಿದ್ದಾರೆ.

ಎಬಿಡಿ ಅವರ ನಿವೃತ್ತಿಯ ಬಗ್ಗೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಆಧುನಿಕ ಕ್ರಿಕೆಟ್ ನ ಶ್ರೇಷ್ಠ ಕ್ರಿಕೆಟಿಗ ಎಂದು ಹೇಳಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಅವರನ್ನು ಸಹೋದರ, ಕ್ರಿಕೆಟ್ ಏಲಿಯನ್ ಅಂತ ಕೂಡ ಹೇಳಿಕೊಂಡಿದ್ದಾರೆ.

2011ರಿಂದ ಆರ್ ಸಿಬಿ ಜೊತೆಗೆ ಬಾಂಧವ್ಯವನ್ನು ಹೊಂದಿರುವ ಎಬಿಡಿ ಆರ್ ಸಿಬಿ ಪಾಲಿನ ಎವರ್ ಗ್ರೀನ್ ಹೀರೋ. ಆರ್ ಸಿಬಿಯ ರೋಚಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಎಬಿಡಿ ಆರ್ ಸಿಬಿ ತಂಡದ ಅಪತ್ಭಾಂದವ ಅಂತಲೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು.
ಎಬಿಡಿ ಸ್ಪೂರ್ತಿದಾಯಕ ವ್ಯಕ್ತಿ. ನಿನ್ನ ಸಾಧನೆಯ ಬಗ್ಗೆ ಹೆಮ್ಮೆ ಇದೆ. ಆರ್ ಸಿಬಿ ತಂಡಕ್ಕೆ ನಿನ್ನ ಕೊಡುಗೆ ಅದ್ಭುತವಾದದ್ದು. ನೀನು ನನ್ನ ಸಹೋದರ. ನಮ್ಮ ಕ್ರೀಡೆಗಿಂತಲೂ ಮಿಗಿಲಾದದ್ದು ಎಂದು ವಿರಾಟ್ ಕೊಹ್ಲಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ನಿನ್ನ ನಿರ್ಧಾರ ನನಗೆ ಬೇಸರವನ್ನುಂಟು ಮಾಡಿದೆ. ಆದ್ರೂ ನನಗೆ ಗೊತ್ತಿದೆ. ನೀನು ಉತ್ತಮ ನಿರ್ಧಾರವನ್ನೇ ತೆಗೆದುಕೊಂಡಿದ್ದಿಯಾ ಅನ್ನುವುದು. ಐ ಲವ್ ಯೂ ಎಂದು ವಿರಾಟ್ ಹೇಳಿಕೊಂಡಿದ್ದಾರೆ.

37ರ ಹರೆಯದ ಎಬಿಡಿ ವಿಲಿಯರ್ಸ್ ಅವರು 114 ಟೆಸ್ಟ್, 228 ಏಕದಿನ ಮತ್ತು 78 ಟಿ-20 ಪಂದ್ಯಗಳನ್ನು ಆಡಿದ್ದಾರೆ.
ಇನ್ನು ಕ್ರಿಕೆಟ್ ಜಗತ್ತಿನ ಅನೇಕ ಕ್ರಿಕೆಟಿಗರು ಎಬಿಡಿ ವಿಲಿಯರ್ಸ್ ಅವರ ನಿವೃತ್ತಿ ನಿರ್ಧಾರಕ್ಕೆ ಪ್ರತಿ ಕ್ರಿಯೆ ನೀಡಿದ್ದಾರೆ. ಇಂಗ್ಲೆಂಡ್ ಸ್ಯಾಮ್ ಬಿಲ್ಲಿಂಗ್ಸ್, ಜೇಸನ್ ರಾಯ್, ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ, ಟೀಮ್ ಇಂಡಿಯಾದ ಶಿಖರ್ ಧವನ್, ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಎನ್ ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ಎಬಿಡಿ ಅವರ ಆಟ ಮತ್ತು ವ್ಯಕ್ತಿತ್ವವನ್ನು ಗುಣಗಾನ ಮಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd