ಟೂರ್ನಿಯಿಂದ ಹೊರಬಿದ್ದ ಟೀಮ್ ಇಂಡಿಯಾಕ್ಕೆ ಔಪಚಾರಿಕ ಪಂದ್ಯ- ಕೊಹ್ಲಿ ಕ್ಯಾಪ್ಟನ್ಸಿಗೆ ಬೇಕಿದೆ ಜಯದ ಗುಡ್ ಬೈ

1 min read
Team India saaksha TV

ಟೂರ್ನಿಯಿಂದ ಹೊರಬಿದ್ದ ಟೀಮ್ ಇಂಡಿಯಾಕ್ಕೆ ಔಪಚಾರಿಕ ಪಂದ್ಯ- ಕೊಹ್ಲಿ ಕ್ಯಾಪ್ಟನ್ಸಿಗೆ ಬೇಕಿದೆ ಜಯದ ಗುಡ್ ಬೈ

ಟಿ20 ವಿಶ್ವಕಪ್ನ ಸೂಪರ್ 12ರ ಈ ಪಂದ್ಯಕ್ಕೆ ಯಾವುದೇ ಮಹತ್ವವಿಲ್ಲ. ಹಾಗಂತ ಸೋಲು-ಗೆಲುವುಗಳಿಗೆ ಆದ್ಯತೆ ಇದ್ದೇ ಇದೆ. ಯಾಕಂದ್ರೆ ಗ್ರೂಪ್ 2ರಿಂದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಈಗಾಗಲೇ ಸೆಮಿಫೈನಲ್ ಪ್ರವೇಶ ಪಡೆದಿದೆ. ಟೀಮ್ ಇಂಡಿಯಾ ಗ್ರೂಪ್ನಲ್ಲಿ 3ನೇ ಸ್ಥಾನಿಯಾಗುವುದು ಗ್ಯಾರೆಂಟಿ. ಆದರೆ ನಮಿಬಿಯಾ ವಿರುದ್ಧ ಭರ್ಜರಿ ಆಟವಾಡಿ ಟೀಮ್ ಇಂಡಿಯಾ ಕೊಹ್ಲಿ ಟಿ20 ಕ್ಯಾಪ್ಟನ್ಸಿಗೆ ದೊಡ್ಡ ಗಿಫ್ಟ್ ನೀಡುವ ಯೋಚನೆ ಮಾಡಿದೆ.

ಅಫ್ಘಾನ್ ಮತ್ತು ಸ್ಕಾಟ್ಲೆಂಡ್ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದ್ದ ಟೀಮ್ ಇಂಡಿಯಾ ಈಗ ಡೇಂಜರಸ್ ಆಗಿ ಕಾಣುತ್ತಿದೆ. ಆದರೆ ಟೂರ್ನಿಯಿಂದ ಹೊರಬಿದ್ದ ನೋವಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಅದ್ಭುತ ಲಯದಲ್ಲಿದೆ. ರಾಹುಲ್-ರೋಹಿತ್ ಜೋಡಿಯ ಆರ್ಭಟಕ್ಕೆ ಎದುರಾಳಿಗಳು ನಡುಗಿದ್ದಾರೆ. ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹೀಗೆ ಬಿಗ್ ಹಿಟ್ಟರ್ಗಳ ಸಾಲೇ ಇದೆ. ಬೌಲಿಂಗ್ನಲ್ಲೂ ಟೀಮ್ ಇಂಡಿಯಾ ಲಯಕ್ಕೆ ಮರಳಿದೆ. ಬುಮ್ರ, ಶಮಿ ಮತ್ತು ಅಶ್ವಿನ್ ವಿಕೆಟ್ ಬೇಟೆಯಲ್ಲಿದ್ದಾರೆ. ಜಡೇಜಾ ಮತ್ತು ವರುಣ್ ಚಕ್ರವರ್ತಿ ಮ್ಯಾಜಿಕ್ ಕೂಡ ನಡೆಯುತ್ತಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಫರ್ಪೆಕ್ಟ್ ತಂಡವಾಗಿ ಕಂಡರೂ ಸೆಮಿಫೈನಲ್ನಿಂದ ಹೊರಬಿದ್ದಿದೆ.

ಇನ್ನು ನಮಿಬಿಯಾ ತಂಡ ಟೂರ್ನಿಯಲ್ಲಿ ಈ ಹಂತಕ್ಕೆ ಏರಿದ್ದೇ ದೊಡ್ಡ ಸಾಧನೆ. ಡೇವಿಡ್ ವೀಸ್ ಒಬ್ಬರೇ ಸ್ಟಾರ್ ಮತ್ತು ಸೂಪರ್ ಸ್ಟಾರ್. ಆದರೆ ತಂಡದ ಸಾಂಘೀಕ ಹೋರಾಟ ಇಲ್ಲಿ ತನಕ ಗಮನಸೆಳೆದಿದೆ. ಟೀಮ್ ಇಂಡಿಯಾ ವಿರುದ್ಧ ಆಡುವ ಅನುಭವ ನಮಿಬಿಯಾಕ್ಕೆ ಸಿಗಲಿದೆ. ಒಟ್ಟಿನಲ್ಲಿ ದುಬೈನಲ್ಲಿ ಟೂರ್ನಿಯಲ್ಲಿ ಮಹತ್ವವಿಲ್ಲದ ಪಂದ್ಯವಾದರೂ ವಿರಾಟ್ ಕೊಹ್ಲಿಯ ಕ್ಯಾಪ್ಟನ್ಸಿಗೆ ದೊಡ್ಡ ಮ್ಯಾಚ್.

ಸಂಭಾವ್ಯ XI
ಟೀಮ್ ಇಂಡಿಯಾ:
1. ಕೆ.ಎಲ್.ರಾಹುಲ್, 2. ರೋಹಿತ್ ಶರ್ಮಾ, 3. ಇಶನ್ ಕಿಶನ್, 4. ವಿರಾಟ್ ಕೊಹ್ಲಿ, 5. ಸೂರ್ಯಕುಮಾರ್ ಯಾದವ್/ ಹಾರ್ದಿಕ್ ಪಾಂಡ್ಯ, 6. ರಿಷಭ್ ಪಂತ್ 7. ರವೀಂದ್ರ ಜಡೇಜಾ, 8.ಶಾರ್ದೂಲ್ ಥಾಕೂರ್, 9. ಮೊಹಮ್ಮದ್ ಶಮಿ, 10. ಜಸ್ ಪ್ರಿತ್ ಬುಮ್ರಾ, 11. ಆರ್. ಅಶ್ವಿನ್/ ವರುಣ್ ಚಕ್ರವರ್ತಿ
ನಮಿಬಿಯಾ
1.ಸ್ಟೀಫನ್ ಬಾರ್ಡ್, 2.ಕ್ರೆಗ್ ವಿಲಿಯಮ್ಸ್, 3. ಗೆರಾಲ್ಡ್ ಎರಾಸ್ಮಸ್ 4. ಝೇನ್ ಗ್ರೀನ್, 5. ಮೈಕಲ್ ವಾನ್ ಲಿಂಗನ್, 6. ಡೇವಿಡ್ ವೀಸ್, 7. ರುಬೆನ್ ಟ್ರಂಪಲ್ಮನ್, 8.ಜಾನ್ ನಿಕೊಲ್ ಲಾಫ್ಟಿ ಈಟನ್, 9. ಜಾನ್ ಫ್ರೈಲಿಂಗ್. 10.ಜೆ.ಜೆ.ಸ್ಮಿಟ್, 11. ಬರ್ನಾಡ್ ಸ್ಕೋಲ್ಸ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd