ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮೆಂಟರ್ ಆಗಿ ಟೀಮ್ ಇಂಡಿಯಾ ಕ್ಯಾಂಪ್ಗೆ ಸೇರಿಕೊಂಡಿದ್ದಾರೆ.
ಬಿಸಿಸಿಐ ಈ ಕುರಿತು ಟ್ವಿಟ್ ಮಾಡಿಕೊಂಡಿದೆ. ಕಿಂಗ್ ಗೆ ಸ್ವಾಗತ. ಎಮ್.ಎಸ್. ಧೋನಿ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಅದು ಹೊಸ ಜವಾಬ್ದಾರಿಯೊಂದಿಗೆ ಎಂದು ಬಿಸಿಸಿಐ ಟ್ವಿಟ್ ಮಾಡಿದೆ.
ಯುಎಇನಲ್ಲಿ ನಡೆಯುತ್ತಿರುವ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಮಹೇಂದ್ರ ಸಿಂಗ್ ಧೋನಿ ಅವರನ್ನು ಟೀಮ್ ಇಂಡಿಯಾದ ಮೆಂಟರ್ ಅಗಿ ಬಿಸಿಸಿಐ ನೇಮಕ ಮಾಡಿತ್ತು. ಇದೀಗ ಹೆಡ್ ಕೋಚ್ ರವಿಶಾಸ್ತಿç, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಸೇರಿದಂತೆ ಟೀಮ್ ಇಂಡಿಯಾದ ಆಟಗಾರರು ಧೋನಿ ಅವರನ್ನು ಬರಮಾಡಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ್ದ ವಿರಾಟ್ ಕೊಹ್ಲಿ, ಧೋನಿ ತಂಡದ ಮೆಂಟರ್ ಆಗಿರೋದು ತುಂಬಾನೇ ಖುಷಿ ತಂದಿದೆ. ಧೋನಿ ಈ ಹಿಂದೆಯೂ ತಂಡದ ಮೆಂಟರ್ ಆಗಿದ್ದರು. ಅವರ ಅನುಭವ ತಂಡಕ್ಕೆ ವರದಾನವಾಗಲಿದೆ. ಮುಖ್ಯವಾಗಿ ಯುವ ಆಟಗಾರರಿಗೆ ಧೋನಿಯ ಅನುಭವ ಸಾಕಷ್ಟು ಪ್ರಯೋಜವಾಗಲಿದೆ ಎಂದು ಹೇಳಿದ್ದಾರೆ.
ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಕಪ್ ಗೆದ್ದಿದ್ದ ಧೋನಿ ಆ ನಂತರದ ದಿನಗಳಲ್ಲಿ ಟೀಮ್ ಇಂಡಿಯಾವನ್ನು ಯಶಸ್ವಿನ ಉತ್ತುಂಗಕ್ಕೇರಿಸಿದ್ದರು. ಅಲ್ಲದೆ ೨೦೧೧ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಿದ್ದರು. ಮೂರು ಐಸಿಸಿ ಪ್ರಶಸ್ತಿ ಗೆದ್ದ ಹೆಗ್ಗಳಿಕೆಯೂ ಧೋನಿ ಅವರಿಗಿದೆ.
೨೦೧೯ರ ಏಕದಿನ ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಧೋನಿ ಅಂತಾರಾಷ್ಟಿçÃಯ ಕ್ರಿಕೆಟ್ ನಿಂದ ದೂರವೇ ಉಳಿದುಕೊಂಡಿದ್ದರು. ೨೦೨೦ರಲ್ಲಿ ಅಂತಾರಾಷ್ಟಿçÃಯ ಕ್ರಿಕೆಟ್ ಗೂ ವಿದಾಯ ಹೇಳಿದ್ದರು.
ಈ ನಡುವೆ ೨೦೨೦ ಟಿ-ಟ್ವೆಂಟಿ ವಿಶ್ವಕಪ್ ಆಡಬೇಕು ಅನ್ನೋ ಧೋನಿ ಆಸೆಗೆ ಕೋವಿಡ್ ಅಡ್ಡಿಯನ್ನುಂಟು ಮಾಡಿತ್ತು. ಇದೀಗ ೨೦೨೧ರ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಆಟಗಾರನಾಗಿ ಅಲ್ಲದಿದ್ರೂ ಟೀಮ್ ಇಂಡಿಯಾದ ಮೆಂಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಕ್ಟೋಬರ್ ೧೮ರಂದು ಟೀಮ್ ಇಂಡಿಯಾ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಇಂಗ್ಲೆAಡ್ ವಿರುದ್ಧ ಆಡಲಿದೆ. ಅಕ್ಟೋಬರ್ ೨೪ರಂದು ಪಾಕ್ ವಿರುದ್ಧ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ಆಡಲಿದೆ.
ದಿನ ಭವಿಷ್ಯ (18-02-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
ಫೆಬ್ರವರಿ 18, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ: ಮೇಷ ರಾಶಿ (Aries) ಇಂದು ನೀವು ಶಕ್ತಿಯುತವಾಗಿ ಮತ್ತು ಸೃಜನಶೀಲರಾಗಿರುತ್ತೀರಿ. ನಿಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು...