ಕಳೆದ ಎರಡು ತಿಂಗಳಿನಿಂದ ಐಪಿಎಲ್ 2023ರಲ್ಲಿ ತೊಡಗಿದ್ದ ಟೀಂ ಇಂಡಿಯಾ ಆಟಗಾರರು ಇದೀಗ ಮತ್ತೆ ಒಟ್ಟಾಗಿ ಮೈದಾನಕ್ಕಿಳಿಯಲಿದ್ದು, ಭಾರತ ತಂಡದ ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್ನ ಕಂಪ್ಲೀಟ್ ವೇಳಾಪಟ್ಟಿ ಇಲ್ಲಿದೆ.
ಐಪಿಎಲ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನತ್ತ ಮುಖ ಮಾಡಿರುವ ಟೀಂ ಇಂಡಿಯಾ ಆಟಗಾರರು, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ಮೂಲಕ ಕ್ರಿಕೆಟ್ ಪಯಣ ಆರಂಭಿಸಲಿದ್ದಾರೆ. ಜೂ.7ರಿಂದ ಲಂಡನ್ನ ಓವಲ್ನಲ್ಲಿ ಆರಂಭಗೊಳ್ಳಿರುವ ಪಂದ್ಯದಲ್ಲಿ ಭಾರತದ ಆಟಗಾರರು ಆಸ್ಟ್ರೇಲಿಯಾ ತಂಡದ ಚಾಲೆಂಜ್ ಎದುರಿಸಲಿದ್ದಾರೆ.
WTC ನಂತರ, ರೋಹಿತ್ ಶರ್ಮಾ ನೇತೃತ್ವದ ಭಾರತದ ಆಟಗಾರರು 2023ರ ಏಕದಿನ ವಿಶ್ವಕಪ್ ಆರಂಭದವರೆಗೆ ಬ್ಯಾಕ್-ಟು-ಬ್ಯಾಕ್ ODI ಸರಣಿಗಳನ್ನ ಆಡಲಿದ್ದಾರೆ. ಈ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೂನ್ನಿಂದ ಜುಲೈ ಮಧ್ಯದವರೆಗೆ ಒಂದು ತಿಂಗಳ ವಿರಾಮ ಸಹ ನೀಡಿದ್ದು, ಇದಕ್ಕಾಗಿ ಜೂ.20 ರಿಂದ 30ರ ನಡುವೆ ನಡೆಯಬೇಕಿದ್ದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ರದ್ದುಗೊಳಿಸಲು ನಿರ್ಧರಿಸುವ ಸಾಧ್ಯತೆ ಇದೆ.
ಉಳಿದಂತೆ ಜುಲೈ-ಆಗಸ್ಟ್ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಿದ್ದು, ಜುಲೈ 12ರಿಂದ ಆರಂಭಗೊಳ್ಳಲಿರುವ ಪ್ರವಾಸದಲ್ಲಿ ಟೀಂ ಇಂಡಿಯಾ ಆಟಗಾರರು ವಿಂಡೀಸ್ ವಿರುದ್ಧ ಎರಡು ಟೆಸ್ಟ್, ಮೂರು ODI ಮತ್ತು 5 T20I ಪಂದ್ಯಗಳನ್ನು ಆಡಲಿದ್ದಾರೆ. ಇದಾದ ಕೆಲವೇ ದಿನಗಳ ಬಳಿಕ ಭಾರತ ತಂಡದ ಏಷ್ಯಾ ಕಪ್ನಲ್ಲಿ ಭಾಗವಹಿಸಲಿದೆ. ಆದರೆ ಟೂರ್ನಿಯನ್ನ ಆಯೋಜಿಸುವ ಕುರಿತಂತೆ ಭಾರತ ಮತ್ತು ಪಾಕಿಸ್ತಾನ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವ ಕಾರಣ ಪ್ರಸ್ತುತ ಏಷ್ಯಾ ಕಪ್ 2023ರ ವೇಳಾಪಟ್ಟಿ ಹೊರಬಂದಿಲ್ಲ. ಆದರೆ ಏಷ್ಯಾ ಕಪ್ 2023ರಲ್ಲಿ ಒಟ್ಟು 12 ಪಂದ್ಯಗಳನ್ನು ಆಡಲು ಸಿದ್ಧವಾಗಿದೆ.
ಈ ಎಲ್ಲಾ ಟೂರ್ನಿಗಳು ಮುಕ್ತಾಯಗೊಂಡ ಬೆನ್ನಲ್ಲೇ ಅಕ್ಟೋಬರ್-ನವೆಂಬರ್ನಲ್ಲಿ ICC ಪುರುಷರ 2023 ODI ವಿಶ್ವಕಪ್ ಆರಂಭವಾಗಲಿದೆ. ಈ ಮಹತ್ವದ ಟೂರ್ನಿಯ ಭಾರತದಲ್ಲೇ ನಡೆಯಲಿದ್ದು, ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ. ಪಂದ್ಯಾವಳಿಯು ಒಟ್ಟು 48 ಪಂದ್ಯಗಳನ್ನು ಒಳಗೊಂಡಿರುತ್ತದೆ, ಲೀಗ್ ಹಂತದಲ್ಲಿ ಪ್ರತಿ ತಂಡವು ಒಂಬತ್ತು ಪಂದ್ಯಗಳನ್ನು ಆಡುತ್ತದೆ. ಏಕದಿನ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಂ ಇಂಡಿಯಾ ಆಟಗಾರರು ಸೌತ್ ಆಫ್ರಿಕಾಕ್ಕೆ ತೆರಳಲಿದ್ದಾರೆ. ವಷ್ಯಾಂತ್ಯಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತವು 2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್, 3 ODI ಮತ್ತು 3 T20I ಪಂದ್ಯಗಳನ್ನ ಆಡಲಿದೆ.