ಬೆಂಗಳೂರು: ಅಪಾರ್ಟ್ಮೆಂಟ್ ನ 33ನೇ ಮಹಡಿಯಿಂದ ಟೆಕ್ಕಿಯೊಬ್ಬಾತ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
27 ವರ್ಷದ ಟೆಕ್ಕಿಯೊಬ್ಬ ಬಾಲ್ಕನಿಯಿಂದ (Apartment Balcony) ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸಾವನ್ನಪ್ಪಿದ ಯುವಕನನ್ನು ದಿಪಾಂಶು ಶರ್ಮಾ ಎನ್ನಲಾಗಿದೆ.
ಈ ಘಟನೆ ಶುಕ್ರವಾರ ಬೆಳಗ್ಗೆ 6.45ರ ಸುಮಾರಿಗೆ ಬೆಂಗಳೂರಿನ ಕೆಆರ್ ಪುರ (KR Pura) ಹತ್ತಿರದ ಕೊಡಿಗೇಹಳ್ಳಿಯಲ್ಲಿ ನಡೆದಿದೆ.
ಸಾವನ್ನಪ್ಪಿದ ಯುವಕ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಸಿಗರೇಟ್ ಸೇದಲೆಂದು ಬಾಲ್ಕನಿಗೆ ತೆರಳಿದ್ದ. ಆಗ ಆಯತಪ್ಪಿ ಅಪಾರ್ಟ್ಮೆಂಟ್ ನ 33ನೇ ಫ್ಲೋರ್ ನಿಂದ ಕೆಳಗೆ ಬಿದ್ದು, ಸಾವನ್ನಪ್ಪಿದ್ದಾನೆ. ಈ ಕುರಿತು ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.