ನವದೆಹಲಿ: ದೇಶದಲ್ಲಿ ಪಂಚ ರಾಜ್ಯ ಚುನಾವಣೆ ಮುಕ್ತಾಯವಾಗಿದ್ದು, ಸಮೀಕ್ಷೆಗಳತ್ತ ಎಲ್ಲರೂ ಚಿತ್ತ ಹರಿಸಿದ್ದಾರೆ. ಸದ್ಯ ತೆಲಂಗಾಣದಲ್ಲಿ ಫಲಿತಾಂಶ ಅಚ್ಚರಿಯಾಗುವ ಸಾಧ್ಯತೆ ಇದೆ.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಆಡಳಿತಾರೂಢ ಬಿಆರ್ ಎಸ್ ಮಧ್ಯೆ ದೊಡ್ಡ ಪೈಪೋಟಿ ಇದೆ ಎನ್ನಲಾಗುತ್ತಿದೆ. ತೆಲಂಗಾಮದಲ್ಲಿ 199 ವಿಧಾಸಭಾ ಕ್ಷೇತ್ರಗಳಿದ್ದು, ಜನ್ಕೀಬಾತ್: ಕಾಂಗ್ರೆಸ್ 48-64, ಬಿಆರ್ಎಸ್ 40-55, ಬಿಜಪಿ 7-13, ರಿಪಬ್ಲಿಕ್ ಟಿವಿ-ಸಿ ವೋಟರ್: ಕಾಂಗ್ರೆಸ್ 47-59, ಬಿಆರ್ಎಸ್ 48-60, ಬಿಜೆಪಿ 5, ಪೋಲ್ ಸ್ಟ್ರಾಟಜಿ ಗ್ರೂಪ್: ಕಾಂಗ್ರೆಸ್ 49-54, ಬಿಆರ್ಎಸ್ 53-58, ಬಿಜೆಪಿ 4-6 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಆರ್ಎಸ್ 88 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನುಳಿದಂತೆ ಕಾಂಗ್ರೆಸ್ 19, ಎಐಎಂಐಎಂ 7, ಟಿಡಿಪಿ 2 ಹಾಗೂ ಬಿಜೆಪಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದವು. ಕಳೆದ ಬಾರಿಯ ಚುನಾವಣೆಯಲ್ಲಿ ಗೆದ್ದಿದ್ದ ಬಿಆರ್ ಎಸ್ ಗೆ ಈ ಬಾರಿ ಕಾಂಗ್ರೆಸ್ ಟಫ್ ಫೈಟ್ ನೀಡಲಿದೆ ಎನ್ನಲಾಗುತ್ತಿದೆ.