ದೆಹಲಿಯಲ್ಲಿ 40 ಡಿಗ್ರಿ ಮುಟ್ಟಿದ ಬಿಸಿಲಿನ ತಾಪಮಾನ
ಮಾರ್ಚ್, ಏಪ್ರಿಲ್ ತಿಂಗಳು ಆರಂಭವಾಗುತ್ತಿದ್ದಂತೆಯೇ ದೇಶದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ರಾಜಧಾನಿ ದೆಹಲಿಯಲ್ಲಿ ಬಿಸಿಲಿನ ತಾಪಮಾನ ಇಂದು ಮತ್ತು ನಾಳೆಗೆ 40 ಡಿಗ್ರಿ ತಲುಪಬಹುದಾದ ಸಾಧ್ಯತೆ ಇದೆ. ಮಧ್ಯ ಭಾರತ ಮತ್ತು ಮಹಾರಾಷ್ಟ್ರದಲ್ಲಿ ಐದು ದಿನಗಳ ಕಾಲ ಶಾಖದ ಅಲೆ ಎದ್ದೇಳಲಿದೆ. ಏಪ್ರಿಲ್ ಒಂದು ಅಥವಾ ಎರಡು ರಂದು ದೆಹಲಿಯಲ್ಲಿ ಸ್ವಲ್ಪಮಟ್ಟಿಗೆ ಬಿಸಿಲಿನ ತಾಪಮಾನ ಇಳಿಯಬಹುದು.
ಮುಂದಿನ 7ರಿಂದ 10 ದಿನಗಳಲ್ಲಿ ದೆಹಲಿ, ರಾಜಸ್ಥಾನ, ಮಧ್ಯ ಭಾರತ, ತೆಲಂಗಾಣ, ಒಡಿಶಾ, ಛತ್ತೀಸ್ಗಢದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ದೆಹಲಿ ವಿಜ್ಞಾನಿ ಆರ್.ಕೆ.ಜೆನಾಮಣಿ ಹೇಳಿದ್ದಾರೆ. ಕೇರಳ, ಕರ್ನಾಟಕದ ಕೆಲವು ಭಾಗಗಳು ಮತ್ತು ಈಶಾನ್ಯದಲ್ಲಿ ಮಾತ್ರ ಸ್ವಲ್ಪ ಮಳೆ ಸಾಧ್ಯತೆ ಇದೆ.
ಮಧ್ಯ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಉಂಟಾಗಬಹುದು ಎಂದು ಹವಾಮಾನ ತಜ್ಞ ಜಯಂತ್ ಸರ್ಕಾರ್ ಹೇಳಿದ್ದಾರೆ. ಈ ಜಿಲ್ಲೆಗಳು ಅಹಮದ್ನಗರ, ಸೊಲ್ಲಾಪುರ, ಜಲಗಾಂವ್. ಇದಲ್ಲದೆ, ಮುಂದಿನ ಮೂರು ದಿನಗಳವರೆಗೆ ಮರಾಠವಾಡದ ಔರಂಗಾಬಾದ್, ಹಿಂಗೋಲಿ, ಪರ್ಭಾನಿ ಮತ್ತು ಜಲ್ನಾದಲ್ಲಿ ಬಿಸಿಗಾಳಿ ಮುಂದುವರಿಯುವ ಸಾಧ್ಯತೆಯಿದೆ.