ನವದೆಹಲಿ: ಪಾಪಿಯೊಬ್ಬ 4 ವರ್ಷದ ಬಾಲಕನ ಕತ್ತು ಸೀಳಿ ರಕ್ತ ಕುಡಿದ ಅಮಾನುಷ ಘಟನೆ ನಡೆದಿದೆ.
ಈ ಘಟನೆ ಪಂಜಾಬ್ನ ಖನ್ನಾದಲ್ಲಿ ನಡೆದಿದೆ. ರಕ್ತ ಕುಡಿದ ಪಾಪಿಗೆ ಮಾಂತ್ರಿಕನೊಬ್ಬ ಹೇಳಿದ್ದ ಎನ್ನಲಾಗಿದೆ. ಮಾಂತ್ರಿಕನ ಸಲಹೆಯಂತೆ ಯುವಕನೊಬ್ಬ 4 ವರ್ಷದ ಬಾಲಕನನ್ನು ನರಬಲಿ ನೀಡಿದ್ದಾನೆ. ಪಕ್ಕದ ಮನೆಯ 4 ವರ್ಷದ ಬಾಲಕನನ್ನು ಮನೆಗೆ ಕರೆದುಕೊಂಡು ಹೋಗಿ, ತಲೆ ಕತ್ತರಿಸಿ, ರಕ್ತ ಕುಡಿದಿದ್ದಾನೆ. ಈ ಭೀಕರ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೈಶಾಚಿಕ ಕೃತ್ಯ ಎಸಗಿದ ಯುವಕನನ್ನು ಬಂಧಿಸಲಾಗಿದೆ.
ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಮಾಂತ್ರಿಕ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಪಾರಿ ಪಕ್ಕದ ಮನೆಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಮನೆಗೆ ಕರೆದೊಯ್ದ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆತನ ಮನೆಯಲ್ಲಿದ್ದ ರಕ್ತಸಿಕ್ತವಾಗಿದ್ದ ಮಗುವಿನ ಶವವನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿ ಬಂಧಿಸಿದ್ದಾರೆ.
ಇಲ್ಲಿ ಮಾಂತ್ರಿಕರ ಸಲಹೆಯ ಮೇರೆಗೆ ಯುವಕನೊಬ್ಬ ನೆರೆ ಮನೆಯಲ್ಲಿ ವಾಸಿಸುತ್ತಿದ್ದ 4 ವರ್ಷದ ಮಗುವನ್ನು ಕತ್ತು ಸೀಳಿ ಕೊಂದಿದ್ದಾನೆ. ಆತ ಮಗುವಿನ ರಕ್ತವನ್ನೂ ಕುಡಿದಿರುವ ಘಟನೆ ಪಂಜಾಬ್ನ ಖನ್ನಾ ಜಿಲ್ಲೆಯ ಸಿಟಿ ಖನ್ನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಪಾರಿ ರಾತ್ರಿ ವೇಳೆ ಮಲಗಿದ್ದ ಮಗುವನ್ನು ಅಪಹರಿಸಿದ್ದ ಎನ್ನಲಾಗಿದೆ. ಬೆಳಗ್ಗೆ ಆ ಮಗುವಿನ ತಂದೆ-ತಾಯಿಗೆ ಈ ವಿಷಯ ಗೊತ್ತಾಗಿದೆ. ನಂತರ ಕಾರ್ಯಾಚರಣೆಗಿಳಿದ ಪೊಲೀಸರು ಕೇವಲ 4 ಗಂಟೆಯೊಳಗೆ ಮಗುವಿನ ಶವವನ್ನು ಹೊರತೆಗೆದು ಆರೋಪಿ ಬಂಧಿಸಿದ್ದಾರೆ.
ರಕ್ತ ಕುಡಿದ ಪಾಪಿಯನ್ನು ಅರವಿಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಪಾಪಿ ಸಮಾಜದಲ್ಲಿ ಶಕ್ತಿಯುತ ವ್ಯಕ್ತಿಯಾಗಬೇಕೆಂದು ಕನಸು ಕಾಣುತ್ತಿದ್ದ. ಹೀಗಾಗಿ ಆತ ಮಾಂತ್ರಿಕರ ಬಳಿ ಸಲಹೆ ಕೇಳಿದ್ದಾನೆ. ಆ ಮಾಂತ್ರಿಕ ಮಗುವನ್ನು ಬಲಿ ನೀಡಿದರೆ ಈ ಸಾಧನೆ ಸಾಧ್ಯ ಎಂದು ಹೇಳಿದ್ದಾನೆ ಎಂಬುವುದನ್ನು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಈ ಸಾಧನೆಗಳನ್ನು ನರಬಲಿಯಿಂದ ಮಾತ್ರ ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿ, ಮಾಂತ್ರಿಕನೇ ನರಬಲಿಯ ವಿಧಾನ ಹೇಳಿಕೊಟ್ಟಿದ್ದಾನೆ ಎನ್ನಲಾಗಿದ್ದು, ಆ ನಂತರ ಯುವಕ ಮಾಂತ್ರಿಕ ಹೇಳಿದ ರೀತಿಯಲ್ಲಿ ಮಾಡಿದ್ದಾನೆ.
ಕೊಲೆಯಾದ 4 ವರ್ಷದ ಮುಗ್ಧ ಮಗು ಸೋಮವಾರ ರಾತ್ರಿ ತನ್ನ ಮನೆಯಲ್ಲಿ ಅಕ್ಕ-ಅಣ್ಣನ ಜೊತೆ ಮಲಗಿತ್ತು. ಆದರೆ ಮಧ್ಯರಾತ್ರಿಯ ನಂತರ ಆರೋಪಿ ಬಂದು ಆ ಮಗುವನ್ನು ರಹಸ್ಯವಾಗಿ ತೆಗೆದುಕೊಂಡು ಹೋಗಿದ್ದಾನೆ. ಪೋಷಕರು ನೋಡಿದಾಗ ಮಗು ಕಂಡಿಲ್ಲ. ಆ ನಂತರ ಗಾಬರಿಯಲ್ಲಿ ಮಗುವನ್ನು ಹುಡುಕಾಡಿದ್ದಾರೆ. ಮಗು ಸಿಗದಾದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರ. ನಂತರ ಕಾರ್ಯಾಚರಣೆಗೆ ಇಳಿದ ಪೊಲೀಸರು, ಕೇವಲ 4 ಗಂಟೆಯೊಳಗೆ ಮಗುವಿನ ರಕ್ತದಲ್ಲಿ ತೊಯ್ದಿದ್ದ ದೇಹವನ್ನು ಯುವಕನ ಮನೆಯಿಂದ ಹೊರಗೆ ತೆಗೆದಿದ್ದಾರೆ. ಸದ್ಯ ಯುವಕನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಮಾಂತ್ರಿಕನಿಗಾಗಿ ಬಲೆ ಬೀಸಿದ್ದು, ವಿಶೇಷ ತಂಡಗಳನ್ನು ರಚಿಸಲಾಗಿದೆ.