ಚಾಲಕ ರಹಿತ ಟೆಸ್ಲಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸಜೀವ ದಹನ..!
ಅಮೆರಿಕಾ : ಟೆಕ್ನಾಲಜಿ ಅಪ್ ಡೇಟ್ ಆದಂತೆಯೇ ಅದರಲ್ಲಿನ ಅಪಯಾಗಳು ಕೂಡ ಅಷ್ಟೇ ಹೆಚ್ಚಾಗುತ್ತೆ. ಟೆಸ್ಲಾ ಕಾರು ಸಂಸ್ಥೆಯು ಚಾಲಕ ರಹಿತ ಟೆಸ್ಲಾ ಕಾರು ಮಾದರಿ ಪರಿಚಯಿಸಿದ್ದು, ಇಂತಹ ಕಾರಿನಲ್ಲಿ ಕುಳಿತು ಪ್ರಾಯಣಿಸುತ್ತಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ. ಈ ಘಟನೆ ಟೆಕ್ಸಾಸ್ ನಲ್ಲಿ ನಡೆದಿದೆ. 2019ರ ಟೆಸ್ಲಾ ಮಾಡೆಲ್ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು.
ಕಾರು ಮರಕ್ಕೆ ಡಿಕ್ಕಿಹೊಡೆದು ಬೆಂಕಿ ಹೊತ್ತಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರೂ ಹಿಂದಿನ ಸೀಟಿನಲ್ಲಿ ದಹಿಸಿ ಹೋಗಿರುವುದನ್ನು ಕಂಡಿರುವ ಪೊಲೀಸರು ಇದೊಂದು ಚಾಲಕ ರಹಿತವಾಗಿರುವ ಕಾರು ಎಂದಿದ್ದಾರೆ.
ಟೆಸ್ಲಾ ಕಂಪನಿ 2019ರಲ್ಲಿ ಚಾಲಕ ರಹಿತ ಕಾರನ್ನು ಕಂಡುಹಿಡಿದಿದೆ. ಅಂಕುಡೊಂಕಾದ ರಸ್ತೆಯಲ್ಲಿ ಕಾರಿನ ಚಾಲನೆ ಸರಿಯಾಗಿ ಆಗದ ಕಾರಣಕ್ಕೆ ತಂತ್ರಜ್ಞಾನವನ್ನು ಇನ್ನಷ್ಟು ಬಲಪಡಿಸಿ ಕಾರಿನ ವೇಗವನ್ನು ಹೆಚ್ಚಿಸಿತ್ತು. ಇದರ ಪರಿಣಾಮವಾಗಿ ಕಾರು ವೇಗವನ್ನು ಪಡೆದುಕೊಂಡು ಈ ಅನಾಹುತ ಆಗಿರುವುದಾಗಿ ಹೇಳಲಾಗಿದೆ.